JAGADISH SHETTAR: ಪಕ್ಷದ ಆಂತರಿಕ ಸಮಸ್ಯೆಗೆ ವರಿಷ್ಠರು ಚಿಂತನೆ ಮಾಡ್ತಾರೆ: ಶೆಟ್ಟರ್

ಹುಬ್ಬಳ್ಳಿ: ಬಿಜೆಪಿ ದೊಡ್ಡ ಪಕ್ಷ ಆಗಿರೋದ್ರಿಂದ ಒಂದಷ್ಟು ಅಸಮಾಧಾನ, ಅತೃಪ್ತಿ ಇದ್ದೇ ಇರುತ್ತದೆ ಎಂದು ಮಾಜಿ ಸಿಎಂ ಜಗದೀಶ್ ಶೆಟ್ಟರ್ ಹೇಳಿದರು.

ನಗರದಲ್ಲಿಂದು ಮಾಧ್ಯಮದ ಜೊತೆಗೆ ಮಾತನಾಡಿದ ಅವರು, ರಾಜ್ಯದಲ್ಲಿ ಎಲ್ಲಾ ಬೆಳವಣಿಗೆ ಹೈಕಮಾಂಡ್ ಗೆ ಗೊತ್ತಿದೆ. ಅದರ ಬಗ್ಗೆ ವರಿಷ್ಠ ಚಿಂತನೆ ಮಾಡತ್ತಾರೆ. ನಮ್ಮ ರಾಜ್ಯಾಧ್ಯಕ್ಷ ಬಿವೈ ವಿಜಯೇಂದ್ರರ ಅವರು ಎಲ್ಲಾ ನಿಭಾಯಿಸುತ್ತಾರೆ.‌ ಸಮಸ್ಯೆ ಇಲ್ಲದ ಪಾರ್ಟಿಗಳು ಇಲ್ಲ. ಎಲ್ಲಾ ಪಕ್ಷದಲ್ಲಿ ಸಣ್ಣ ಪುಟ್ಟ ಸಮಸ್ಯೆ ಇದ್ದೆ ಇರುತ್ತವೆ. ಬೇರೆ ಬೇರೆ ಪಕ್ಷದವರು ಸಹ ಬಂದಿದ್ದಾರೆ ಎಂದರು.

ಬಿಜೆಪಿ ಬೃಹತ್ ಪ್ರಮಾಣದಲ್ಲಿ ಬೆಳೆದಿದೆ, ದೊಡ್ಡ ಪಕ್ಷವಾಗಿ ಬಿಜೆಪಿ ಬೆಳೆದಿದೆ‌. ಹೀಗಾಗಿ ಸಣ್ಣಪುಟ್ಟ ಸಮಸ್ಯೆ ಇರ್ತಾವೆ. ಪಕ್ಷದ ಆಂತರಿಕ ಬೆಳವಣಿಗೆಗಳ ಬಗ್ಗೆ ನಾನು ಹೆಚ್ಚು ಮಾತಾಡಲ್ಲ. ಧಾರವಾಡ ಪ್ರತ್ಯೇಕ ಪಾಲಿಕೆ ರಚನೆಗೆ ಸ್ವಾಗತ ಇದೆ. ನಾನು ಕೂಡ ಪಾಲಿಕೆ ವಿಭಜನೆಗೆ ಧ್ವನಿ ಎತ್ತಿ ಪತ್ರ ಬರೆದಿದ್ದೆ ಅಲ್ಲಿನ ಜನರ ಬಹಳ‌‌ದಿನ ಬೇಡಿಕೆ ಇತ್ತು. ವಿಭಜನೆಯಿಂದ ಎರಡು ನಗರಗಳು ಅಭಿವೃದ್ಧಿಯಾಗುವ ಭರವಸೆಯಿದೆ ಎಂದು ಹುಬ್ಬಳ್ಳಿಯಲ್ಲಿ ಜಗದೀಶ್ ಶೆಟ್ಟರ್ ಹೇಳಿದರು.

More News

You cannot copy content of this page