ಬೆಂಗಳೂರು : ರಾಜ್ಯ ಕಾಂಗ್ರೆಸ್ ಭಿನ್ನಮತಕ್ಕೆ ಬ್ರೀಕ್ ಹಾಕುವ ಪ್ರಯತ್ನ ಗಳು ಶುರುವಾಗಿದೆ. ಈ ನಡುವೆ ಕೈಪಾಳಯದಲ್ಲಿ ಬಣ ರಾಜಕೀಯವೂ ಆಂತರಿಕವಾಗಿ ಸದ್ದು ಮಾಡುತ್ತಿದ್ದು, ಸಿಎಂ ಸಿದ್ದರಾಮಯ್ಯ ಹಾಗೂ ಡಿಕೆ ಶಿವಕುಮಾರ್ ತಮ್ಮ ಶಕ್ತಿ ಪ್ರದರ್ಶನಕ್ಕೆ ಪರೋಕ್ಷ ಪ್ರಯತ್ನಗಳನ್ನು ನಡೆಸುತ್ತಿದ್ದಾರೆ. ಸಿಎಂ ಆಗಿ ಯಾರು ಮುಂದುವರಿಯಬೇಕು? ಎಂಬ ಬಗ್ಗೆ ಕಾಂಗ್ರೆಸ್‌ನಲ್ಲಿ ಆಂತರಿಕವಾಗಿ ಚರ್ಚೆಗಳು ಶುರುವಾಗಿದೆ. ಕೆಲವರು ಸಿದ್ದರಾಮಯ್ಯ ಪರವಾಗಿ ಬ್ಯಾಟಿಂಗ್ ಮಾಡುತ್ತಿದ್ದರೆ ಮತ್ತೆ ಕೆಲವರು ಡಿಕೆ ಶಿವಕುಮಾರ್ ಪರವಾಗಿ ಬ್ಯಾಟ್ ಬೀಸ ತೊಡಗಿದ್ದಾರೆ.
ಸಿದ್ದರಾಮಯ್ಯ ಅವರೇ 5 ವರ್ಷ ಸಿಎಂ ಆಗಲಿ ಎಂದು ಸಂಪುಟದ ಪ್ರಭಾವಿ ಸಚಿವರುಗಳು ಹೇಳಿಕೆ ನೀಡುತ್ತಿದ್ದರೆ ಡಿಕೆ ಶಿವಕುಮಾರ್ ಪರವಾಗಿ ಕೆಲವು ಶಾಸಕರು ಇತ್ತೀಚೆಗೆ ಬಹಿರಂಗವಾಗಿ ಧ್ವನಿ ಎತ್ತಲು ಶುರು ಮಾಡಿದ್ದಾರೆ. ಈ ಪೈಕಿ ಬಸವರಾಜ ಶಿವಗಂಗಾ ಅವರು ಡಿಕೆ ಶಿವಕುಮಾರ್ ಅವರು ಸಿಎಂ ಆಗಲಿದ್ದಾರೆ ಎಂದು ಬಹಿರಂಗವಾಗಿ ಹೇಳಿಕೊಂಡಿದ್ದಾರೆ. ಈ ಹಿಂದೆ ಡಿಕೆ ಬಣದ ಶಾಸಕರು ಬಹಿರಂಗವಾಗಿ ಹೇಳಿಕೆ ನೀಡುತ್ತಿದ್ದರೂ ಸದ್ಯ ಅವರು ಮೌನಕ್ಕೆ ಶರಣಾಗಿದ್ದಾರೆ. ಇನ್ನು ಇಬ್ಬರು ನಾಯಕರ ಪರವಾಗಿ ಬ್ಯಾಟಿಂಗ್ ಬೀಸುವವನ್ನು ಎರಡು ಪಂಗಡಗಳಾಗಿ ವಿಂಗಡಿಸಬಹುದು. ಈ ಪೈಕಿ ಒಂದು ವಿಭಾಗ ಬಹಿರಂಗವಾಗಿ ಸಮರ್ಥನೆಗೆ ನಿಂತರೆ ಮತ್ತೊಂದು ತಂಡ ಪರೋಕ್ಷವಾಗಿ ಬೆಂಬಲ ನೀಡುತ್ತಿದೆ.
ಸಿದ್ದರಾಮಯ್ಯ ಪರವಾಗಿ ಬಹಿರಂಗ ಸಮರ್ಥನೆ ಯಾರೆಲ್ಲಾ?
*ಕೆ ಎನ್ ರಾಜಣ್ಣ
*ಬೈರತಿ ಸುರೇಶ್
*ಸತೀಶ್ ಜಾರಕಿಹೊಳಿ
*ಕೆ. ವೆಂಕಟೇಶ್
*ಡಾ. ಎಚ್ ಸಿ ಮಹದೇವಪ್ಪ
*ಕೆ. ಜೆ ಜಾರ್ಜ್
*ಎಂಬಿ ಪಾಟೀಲ್
*ಜಮೀರ್ ಅಹ್ಮದ್ ಖಾನ್
ಸಿದ್ದುಗೆ ಪರೋಕ್ಷ ಬೆಂಬಲ ಯಾರಿಂದ
*ಕೃಷ್ಣ ಬೈರೇಗೌಡ
*ದಿನೇಶ್ ಗುಂಡೂರಾವ್
*ಎಸ್ ಎಸ್ ಮಲ್ಲಿಕಾರ್ಜುನ
*ಸಂತೋಷ್ ಲಾಡ್
*ರಹೀಂ ಖಾನ್
*ಶಿವರಾಜ್ ತಂಗಡಗಿ
ಬಹಿರಂಗ ಬೆಂಬಲದ ಶಾಸಕರು
*ಶಿವಲಿಂಗೇಗೌಡ
*ಅಶೋಕ್ ಪಟ್ಟಣ್
*ನಾರಾಯಣ ಸ್ವಾಮಿ
*ನರೇಂದ್ರ ಸ್ವಾಮಿ
*ಸುಬ್ಬಾರೆಡ್ಡಿ
*ಪ್ರಸಾದ್ ಅಬ್ಬಯ್ಯ
*ಅಜಯ್ ಸಿಂಗ್
ಡಿಕೆಶಿ ಪರವಾಗಿ ಬಹಿರಂಗ ಹಾಗೂ ಪರೋಕ್ಷ ಬೆಂಬಲದ ಶಾಸಕರು
*ಬಸವರಾಜ ಶಿವಗಂಗಾ
*ಕುಣಿಗಲ್ ರಂಗನಾಥ್
*ಮಾಗಡಿ ಬಾಲಕಷ್ಣ
*ರವಿ ಗಣಿಗ
*ಇಕ್ಬಾಲ್ ಹುಸೇನ್
*ಸಿಪಿ ಯೋಗೇಶ್ವರ್
*ಉದಯ ಗೌಡ
*ಎನ್ ಎ ಹ್ಯಾರಿಸ್
*ಆನೆಕಲ್ ಶಿವಣ್ಣ
ಸಚಿವರಿಂದ ಪರೋಕ್ಷ ಬ್ಯಾಟಿಂಗ್
*ಲಕ್ಷ್ಮೀ ಹೆಬ್ಬಾಳ್ಕರ್
*ಮಧು ಬಂಗಾರಪ್ಪ
*ಡಿ. ಸುಧಾಕರ್
ಹೈಕಮಾಂಡ್ ಹಾಗೂ ಬ್ಯಾಲೆನ್ಸ್ ನಿಲುವು
*ರಾಮಲಿಂಗಾ ರೆಡ್ಡಿ
*ಚಲುವರಾಯ ಸ್ವಾಮಿ
*ಶರಣು ಪ್ರಕಾಶ್ ಪಾಟೀಲ್
*ಆರ್ ಬಿ ತಿಮ್ಮಾಪೂರ
*ಪ್ರಿಯಾಂಕ್ ಖರ್ಗೆ
*ಕೆ ಎಚ್ ಮುನಿಯಪ್ಪ
*ಶಿವಾನಂದ ಪಾಟೀಲ್
*ಎಂಸಿ ಸುಧಾಕರ್
*ಬೋಸರಾಜ್
*ಮಂಕಾಳ್ ಸುಬ್ಬ ವೈದ್ಯ