ಥೈಲ್ಯಾಂಡ್ ನಿಂದ ತಾಯಿ ನಾಡಿಗೆ ಮರಳಿದ ನಟ ದರ್ಶನ್- ಬೇಲ್ ಕ್ಯಾನ್ಸಲ್ ಟೆನ್ಶನ್

ಬೆಂಗಳೂರು : ಚಿತ್ರದುರ್ಗದ ರೇಣುಕಾಸ್ವಾಮಿ ಕೊಲೆ ಕೇಸ್ ನಲ್ಲಿ ಜೈಲುಪಾಲಾಗಿದ್ದ ದರ್ಶನಗೆ ಮತ್ತೆ ಜೈಲು ಸೇರುವ ಭೀತಿ ಎದುರಾಗಿದೆ. ಸದ್ಯ ಡೇವಿಲ್ ಸಿನಿಮಾ ಶೂಟಿಂಗ್ ಮುಗಿಸಿ ಥೈಲ್ಯಾಂಡ್ ನಿಂದ ಬೆಂಗಳೂರಿನ ಕೆಂಪೇಗೌಡ ಅಂತರಾಷ್ಟ್ರೀಯ ನಿಲ್ದಾಣಕ್ಕೆ ಬಂದಿಳಿದಿದ್ದಾರೆ.

ನಟ ದರ್ಶನ್ ಜೊತೆಗೆ ಪ್ರಯಾಣ ಬೆಳೆಸಿದ್ದ ಪತ್ನಿ ವಿಜಯ ಲಕ್ಷ್ಮೀ ಮತ್ತು ಮಗ ವಿನೀಶ್ ಕೂಡ ಆಗಮಿಸಿದ್ದಾರೆ. ಫಾರಿನ್ ಗೆ ಹೋಗುವಾಗ ಇದ್ದ ಹುಮ್ಮಸ್ಸು ಬರುವಾಗ ದರ್ಶನ್ ಮುಖದಲ್ಲಿ ಕಾಣಲಿಲ್ಲ…

ಒಂದು ವೇಳೆ ಕರ್ನಾಟಕ ಹೈಕೋರ್ಟ್ ಕೊಟ್ಟಿರೋ ಬೇಲ್ ಕ್ಯಾನ್ಸಲ್ ಆದ್ರೆ ಮುಂದೆ ಏನ್ ಮಾಡಬೇಕು ಅನ್ನೋ ಆತಂಕ ದರ್ಶನ್ ಗೆ ಕಾಡುತ್ತಿದೆ. ವಾದ-ಪ್ರತಿವಾದ ಆಲಿಸಿರೋ ಸುಪ್ರೀಂಕೋರ್ಟ್ ದರ್ಶನ್ ಅಂಡ್ ಗ್ಯಾಂಗ್ ನ ಜಾಮೀನು ತೀರ್ಪನ್ನು ಕಾಯ್ದಿರಿಸಿದೆ. ಮುಂದಿನ ವಾರ ಆದೇಶ ಪ್ರಕಟವಾಗೋ ಸಾಧ್ಯತೆ ಇದೆ.

More News