ಬೆಂಗಳೂರು: ಕನ್ನಡದ ಖ್ಯಾತ ನಟ, ಕರ್ನಾಟಕದ ರತ್ನ ಪುನೀತ್ ರಾಜ್‌ಕುಮಾರ್‌ರವರ ಮೊದಲ ವರ್ಷದ ಪುಣ್ಯ ಸ್ಮರಣೆಯಿಂದ ಇಂದು ನಡೆಯುತ್ತಿದೆ. ಶಿವರಾಜ್ ರಾಘವೇಂದ್ರ ರಾಜ್‌ಕುಮಾರ್, ವಿನಯ್ ರಾಜ್ ಕುಮಾರ್ ಸೇರಿದಂತೆ ಇಡೀ ದೊಡ್ಮನೆ ಕುಟುಂಡ ಹಾಗೂ ಇತರರು ಭಾಗವಹಿಸಿದ್ದಾರೆ.

ಅಪ್ಪು ಅವರ ಕುಟುಂಬದವರು ನಗರದ ಕಂಠೀರವ ಸ್ಡುಡಿಯೋದಲ್ಲಿ ಸಮಾಧಿ ಬಳಿ ಪುಣ್ಯ ಸ್ಮರಣೆಯ ವಿಧಿ ವಿಧಾನಗಳನ್ನು ನೆರವೇರಿಸುತ್ತಿದ್ದಾರೆ. ಇದೇ ವೇಳೆ ಸಂಗೀತ ಕಾರ್ಯಕ್ರಮ ಸೇರಿದಂತೆ ಹಲವು ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗಿದೆ. ಸಾವಿರಾರು ಅಭಿಮಾನಿಗಳು ಸಮಾಧಿ ಸ್ಥಳಕ್ಕೆ ಬಂದ ಅಪ್ಪುಗೆ ನಮನ ಸಲ್ಲಿಸುತ್ತಿದ್ದಾರೆ. ಕೇವಲ ಸ್ಯಾಂಡಲ್ವುಡ್ ಮಾತ್ರವಲ್ಲದೆ, ದೇಶದ ಸಿನಿ ರಂಗದ ಗಣ್ಯರು, ರಾಜಕಾರಣಿಗಳು ಪುನೀತ್ ಅವರನ್ನು ಸ್ಮರಿಸುತ್ತಿದ್ದಾರೆ.
ಆಮ್ ಆದ್ಮಿ ಪಾರ್ಟಿ ರಾಷ್ಟ್ರೀಯ ಸಂಚಾಲಕ ಹಾಗೂ ದೆಹಲಿ ಸಿಎಂ ಅರವಿಂದ್ ಕೇಜ್ರಿವಾಲ್ ಅವರು ಕೂಡ ಪುನೀತ್ ರಾಜ್ ಕುಮಾರ್ ಅವರನ್ನು ಸ್ಮರಿಸಿದ್ದಾರೆ.
“ಮರೆಯದ ಮಾಣಿಕ್ಯನಿಗೆ ನನ್ನದೊಂದು ನಮನ”
ಈ ಬಗ್ಗೆ ಸಾಮಾಜಿಕ ಜಾಲತಾಣ ಟ್ವಿಟರ್‌ನಲ್ಲಿ ಅವರು, “ಮರೆಯದ ಮಾಣಿಕ್ಯನಿಗೆ ನನ್ನದೊಂದು ನಮನ” ಎಂದು ಕನ್ನಡದಲ್ಲಿ ಟ್ವೀಟ್ ಮಾಡಿದ್ದಾರೆ. ನಾನು ಡಾ. ಪುನೀತ್ ರಾಜ್‌ಕುಮಾರ್‌ರವರನ್ನು ಪುಣ್ಯತಿಥಿಯಂದು ವಿಶೇಷವಾಗಿ ಸ್ಮರಿಸುತ್ತಿದ್ದೇನೆ. ಅವರ ಚಲನಚಿತ್ರಗಳು, ಹಾಡುಗಳು, ಸಹೃದಯಿ ವ್ಯಕ್ತಿತ್ವ, ಸಾಮಾಜಿಕ ಕಾರ್ಯಗಳು ಅವರು ನಮ್ಮನ್ನು ಎಂದೂ ತೊರೆಯುವುದಿಲ್ಲ ಎಂದೆನಿಸುವಂತೆ ಮಾಡಿವೆ. ಅವರು ಯಾವಾಗಲೂ ಕರುನಾಡಿನ ಪವರ್ ಸ್ಟಾರ್ ಆಗಿಯೇ ಇರುತ್ತಾರೆ ಎಂದು ಹೇಳಿದ್ದಾರೆ.
ಮರೆಯದ ಮಾಣಿಕ್ಯನಿಗೆ ನನ್ನದೊಂದು ನಮನ.
— Arvind Kejriwal (@ArvindKejriwal) October 29, 2022
I profoundly remember the Icon – Dr Puneeth Rajkumar on his death anniversary.
His movies, songs, kindness & social works make us feel he never left us. He will always be a power star of #Karunadu #AppuLivesOn #DrPunithRajkumar
ರ್ನಾಟಕದ ಆಮ್ ಆದ್ಮಿ ಪಾರ್ಟಿ ರಾಜ್ಯಾಧ್ಯಕ್ಷ ಪೃಥ್ವಿ ರೆಡ್ಡಿ, ಉಪಾಧ್ಯಕ್ಷರಾದ ಭಾಸ್ಕರ್ ರಾವ್ ಸೇರಿದಂತೆ ಅನೇಕ ಎಎಪಿ ಮುಖಂಡರು ಕೂಡ ಪುಣ್ಯತಿಥಿಯಂದು ಪುನೀತ್ ರಾಜ್‌ಕುಮಾರ್‌ರವರನ್ನು ಸ್ಮರಿಸಿಕೊಂಡರು.

ಕನ್ನಡ ಚಿತ್ರರಂಗದಲ್ಲಿ ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್ ಸಿನಿಮಾದಲ್ಲಿ ನಿಜ ಜೀವನದಲ್ಲಿ ರಿಯಲ್ ಹೀರೋ ಆಗಿದ್ದರು.
ದಿಢೀರ್ ಅನಾರೋಗ್ಯದಿಂದ 2021ರ ಅಕ್ಟೋಬರ್ 29 ರಂದು ಬಾರದ ಲೋಕಕ್ಕೆ ಪಯಣ ಬೆಳಸಿದ್ದಾರೆ. ಬೆಳ್ಳಿತೆರೆ ಮೇಲೆ ವಿಜೃಂಭಿಸಿದ ರಾಜಕುಮಾರನ ನೆನವು ಹಚ್ಚ ಹಸಿರಾಗಿಯೇ ಇದೆ.
#arvind kejriwal #delhicm #aap #appu #puneethrajkumar #kannadatweet




