ಬೆಂಗಳೂರು : ವರ್ಗಾವಣೆ ಅಭಿವೃದ್ಧಿ ಹಕ್ಕಿನ ಮಾತೃ ಬೆಂಗಳೂರು ಮಹಾನಗರ ಪಾಲಿಕೆ.ಬಿಬಿ ಎಂಪಿ ಮತ್ತು ಬಿಡಿಎ ವ್ಯಾಪ್ತಿಯಲ್ಲಿ ವಿವಿಧ ಅಭಿವೃದ್ಧಿ ಕಾಮಗಾರಿಗಳಿಗಾಗಿ ಸಾರ್ವಜನಿಕ ಮತ್ತು ಖಾಸಗಿ ಭೂಮಿಯನ್ನು ಸ್ವಾಧೀನ ಪಡಿಸಿಕೊಳ್ಳಲಾಯಿತು.ಅದಕ್ಕೆ ಪರಿಹಾರ ರೂಪದಲ್ಲಿ ಅಭಿವೃದ್ದಿ ಹಕ್ಕು ನೀಡುವ ಪದ್ದತಿ ಆರಂಭಿಸಿದ್ದೇ ಭ್ರಷ್ಟಾಚಾರಕ್ಕೆ ನಾಂದಿಯಾಯಿತು.
ರಸ್ತೆಗಳ ವಿಸ್ತರಣೆಗೆ ಸ್ವಾಧೀನಪಡಿಸಿಕೊಂಡ ಜಮೀನು,ಕಟ್ಟಡಕ್ಕೆ ನಗದು ಪರಿಹಾರದ ಬದಲಾಗಿ ಜಮೀನು,ಕಟ್ಟಡ ಮಾಲೀಕರಿಗೆ ಟಿಡಿಆರ್‌ಸಿ ನೀಡುವ ಪದ್ಧತಿ 2013 ರಿಂದ ಜಾರಿಗೆ ಬಂದಿದೆ. ಅದರಂತೆ ರಸ್ತೆ ಅಗಲೀಕರಣ,ಮೇಲ್ಸೇತುವೆ ನಿರ್ಮಾಣ,ಪಾರ್ಕ್ ಗಳ ರಚನೆ ಹೀಗೆ ಸಾರ್ವಜನಿಕ ಉದ್ದೇಶಕ್ಕಾಗಿ ಖಾಸಗಿಯವರಿಂದ ಜಮೀನು ಪಡೆದುಕೊಂಡರೆ,ನಗದು ಪರಿಹಾರ ವಿತರಿಸಲು ಸಾಧ್ಯ ವಾಗದ ಪ್ರಕರಣಗಳಲ್ಲಿ ಆಸ್ತಿ ಮಾಲೀಕರಿಗೆ ಟಿಡಿಆರ್ ನೀಡಲು ಕಾನೂನಿನಲ್ಲಿ ಅವಕಾಶ ಕಲ್ಪಿಸಲಾಗಿದೆ.
Also Read
ಬಿಬಿಎಂಪಿ ಆರಂಭಿಸಿದ ಟಿಡಿಆರ್ ವ್ಯವಸ್ಥೆಯನ್ನು ಬೆಂಗಳೂರು ನಗರಾಭಿವೃದ್ದಿ ಪ್ರಾಧಿಕಾರ,ಬಿಎಂಆರ್ ಸಿಎಲ್,ಬೆಸ್ಕಾಂ ಸೇರಿದಂತೆ ಸಾರ್ವಜನಿಕ ಪ್ರಾಧಿಕಾರಗಳು ಯಥಾವತ್ತಾಗಿ ಅಳವಡಿಸಿಕೊಂಡವು.ಅಂತೆಯೇ ಭ್ರಷ್ಟಾಚಾರಕ್ಕೂ ಇದೇ ರಹದಾರಿ ಯಾಗಿ ಮಾರ್ಪಟ್ಟಿತು.

ಬಿಎಂಆರ್ ಸಿಎಲ್ ಮತ್ತು ಬಿಡಿಎ : ಪ್ರಸ್ತುತ ಚೆರ್ಚೆಗೆ ಗ್ರಾಸವಾಗಿರುವುದು ಬಿಡಿಎ ವ್ಯಾಪ್ತಿಯ ಲ್ಲಿ ಬಿಎಂಆರ್ ಸಿಎಲ್ ಕೈ ಗೊಂಡಿರುವ ಮೆಟ್ರೋ ವಿಸ್ತರಣಾ ಮಾರ್ಗಗಳು.ಮೆಟ್ರೋ ರೈಲು ಯೋಜನೆಗಾಗಿ ಸಾವಿರಾರು ಸಾವಿರಾರು ಎಕರೆ ಸರ್ಕಾರಿ,ಖಾಸಗಿ ಜಮೀನುಗಳು,ನಿವೇಶನ, ಕಟ್ಟಡಗಳನ್ನು ಸ್ವಾಧೀನಪಡಿಸಿಕೊಳ್ಳಲಾಯಿತು.ಈ ನಿವೇಶನ,ಮನೆ,ತೋಟ ಪ್ರದೇಶಗಳಿಗೆ ಪರಿಹಾರ ರೂಪದಲ್ಲಿ ಬಿಡಿಎ ಟಿಡಿಆರ್ ಸಿ( ಅಭಿವೃದ್ದಿ ಹಕ್ಕು ಪ್ರಮಾಣ ಪತ್ರ) ನೀಡಲು ಮುಂದಾಗಿದೆ.
ಭ್ರಷ್ಟಾಚಾರ ಹೇಗೆ – ಏಕೆ : ಸರ್ಕಾರ ಕೈಗೊಳ್ಳುವ ಯೋಜನೆಗಳಿಗಾಗಿ ಅಭಿವೃದ್ಧಿ ಹಕ್ಕು ವರ್ಗಾ ವಣೆ (ಟಿಡಿಆರ್) ವಿತರಣೆ ಪ್ರಕ್ರಿಯೆಯನ್ನು ಸರಳೀಕರಣ ಗೊಳಿಸಲು ರಾಜ್ಯ ಸರ್ಕಾರ ಕರ್ನಾಟಕ ಪಟ್ಟಣ ಮತ್ತು ಗ್ರಾಮಾಂತರ ಯೋಜನಾ ಕಾಯ್ದೆಗೆ ತಿದ್ದಪಡಿ ಮೂಲಕ ಸುಗ್ರೀವಾಜ್ಞೆ ಹೊರಡಿ ಸಿದೆ.ಈ ಏಕಗವಾಕ್ಷಿ ವ್ಯವಸ್ಥೆ ಜಾರಿಗೆ ತಂದು ಟಿಡಿಆರ್ ವಿತರಣೆ ಮಾಡಲು ಅರಂಭಿಸಿದೆ. ಕಾಯ್ದೆಗೆ ತಂದಿರುವ ತಿದ್ದುಪಡಿ ಮತ್ತೆ ಟಿಡಿಆರ್ ಹಗರಣಗಳಿಗೆ ದಾರಿ ಮಾಡಿಕೊಡುವ ಆರೋಪ ಕೇಳಿ ಬಂದಿದೆ.
ಟಿಡಿಆರ್ ಪ್ರಮಾಣ ಪತ್ರವನ್ನು ಸ್ವತ್ತಿನ ಮಾಲೀಕರು ಕಟ್ಟಡ ಕಟ್ಟುವ ಬಿಲ್ಡರ್ ಮತ್ತಿತರಿಗೆ ಲಾಭಕ್ಕಾಗಿ ಮಾರಾಟ ಮಾಡಬಹುದು .ಟಿಡಿಆರ್ ಮೂಲಕ ಆಸ್ತಿ ಮಾಲೀಕರಿಗೆ ಹೆಚ್ಚುವರಿ ಕಟ್ಟಡ ನಿರ್ಮಾಣ (Additional buildup area) ಹಕ್ಕನ್ನು ನೀಡಲಾಗುತ್ತದೆ. ಸದ್ಯದ ನಿಯಮದ ಪ್ರಕಾರ ಸ್ವಾಧೀನ ಮಾಡಿದ ಭೂಮಿಯ ಎರಡು ಪಟ್ಟು ಅಳತೆಯಲ್ಲಿ ಟಿಡಿಆರ್ ನೀಡಲಾಗುತ್ತದೆ.ಅಂದರೆ 100 ಚ.ಮಿ ವಶಪಡಿಸಲಾದ ಭೂಮಿ ಪ್ರತಿಯಾಗಿ ಭೂ ಮಾಲೀಕನಿಗೆ 200 ಚ.ಮೀಟರ್ ಟಿಡಿಆರ್ ನ್ನು ನೀಡಲಾಗುತ್ತದೆ.ಆದರೆ ಕೆಲವು ಪ್ರಕರಣಗಳಲ್ಲಿ ವಶಪಡಿಸಿಕೊಂಡು ಭೂಮಿಯ ಮಾರುಕಟ್ಟೆ ಮೌಲ್ಯಕ್ಕಿಂತ ಶೇ 100 % ,200 %ರಷ್ಟು ಹೆಚ್ಚು ಮೊತ್ತದ ಟಿಡಿಆರ್ ನೀಡಲಾಗಿರುವ ಆರೋಪವೂ ಕೇಳಿ ಬಂದಿದೆ.

ಬಿಬಿಎಂಪಿಯಿಂದ ಟಿಡಿಆರ್ : ಬೆಂಗಳೂರು ವ್ಯಾಪ್ತಿಯಲ್ಲಿ 2015ರವರೆಗೆ ಟಿಡಿಆರ್ ಅನ್ನು ಬಿಬಿಎಂಪಿಯಿಂದಲೇ ನೀಡಲಾಗು ತ್ತಿತ್ತು.2017 ಮಾರ್ಚ್ ನಂತರ ಸರ್ಕಾರ ಹೊಸ ನಿಯಮಾವಳಿ ಜಾರಿಗೊಳಿಸಿ ಟಿಡಿಆರ್ ನೀಡುವ ಅಧಿಕಾರವನ್ನು ಬಿಡಿಎಗೆ ಹಸ್ತಾಂತರಿಸಿತ್ತು.ಹಾಲಿ ನಿಯಮದ ಪ್ರಕಾರ ಬಿಬಿಎಂಪಿ,ಅಥವಾ ಬಿಎಂಆರ್ ಸಿಎಲ್ ನಂಥ ಯೋಜನಾ ಅನುಷ್ಠಾನ ಏಜೆನ್ಸಿಗಳು ಸರ್ವೆ ಮಾಡಿ ಪ್ರದೇಶಕ್ಕನುಸಾರ ಟಿಡಿಆರ್ ನಿಗದಿ ಮಾಡಿದರೂ,ಯೋಜನಾ ಪ್ರಾಧಿಕಾರಗಳೇ ಅಂತಿಮ ತೀರ್ಮಾನ ಕೈಗೊಳ್ಳುವ ಅಧಿಕಾರ ಹೊಂದಿದೆ.ಯೋಜನಾ ಪ್ರಾಧಿಕಾರಗಳು ಮತ್ತೆ ಪ್ರಸ್ತಾಪಿತ ಯೋಜನಾ ಪ್ರದೇಶಗಳ ಸರ್ವೆ ನಡೆಸಿ ಟಿಡಿಆರ್ ನಿಗದಿಪಡಿ ಸುತ್ತವೆ.ನಗದು ಪರಿಹಾ ರಕ್ಕಾಗಿ ಸಂಪನ್ಮೂಲದ ಕೊರತೆ ಎದುರಿಸುತ್ತಿರುವ ರಾಜ್ಯ ಸರ್ಕಾರ ಇದೀಗ ಟಿಡಿಆರ್ ಮೊರೆ ಹೋಗಿ ಎಡವಟ್ಟು ಮಾಡಿಕೊಂಡಿದೆ.
ಮತ್ತೆ ಟಿಡಿಆರ್ ಅಕ್ರಮದ ಆತಂಕ?: 2019ರಲ್ಲಿ ಟಿಡಿಆರ್ ಅಕ್ರಮ ಬಯಲಿಗೆ ಬಂದಿತ್ತು.ಎಸಿಬಿ ಕಾರ್ಯಾಚರಣೆಯಲ್ಲಿ ಕೆಲವು ಪ್ರಭಾವಿ ರಿಯಲ್ ಎಸ್ಟೇಟ್ ಉದ್ಯಮಿ ಗಳು,ಅಧಿಕಾರಿಗಳು ಭಾಗಿಯಾಗಿದ್ದ ಬಹುಕೋಟಿ ಮೌಲ್ಯದ ‘ಅಭಿ ವೃದ್ಧಿ ಹಕ್ಕು ವರ್ಗಾವಣೆ (ಟಿಡಿಆರ್)ವಂಚನೆ ಪ್ರಕರಣ ಬಯ ಲಾಗಿತ್ತು.ಈ ಸಂಬಂಧ ಬಿಎಂಟಿ ಎಫ್,ಸಿಐಡಿ,ಎಸಿಬಿ ಹೀಗೆ ನಾನಾ ತನಿಖಾ ಸಂಸ್ಥೆಗಳು ವಿಚಾ ರಣೆ ನಡೆಸಿ ನ್ಯಾಯಾಲಯಕ್ಕೆ ಚಾರ್ಜ್ ಶೀಟ್ ಸಲ್ಲಿಸಿವೆ.ಕೆಲವು ವಿಚಾರಣೆ ಹಂತದಲ್ಲಿ,ಇನ್ನೂ ಕೆಲವನ್ನು ಪ್ರಭಾವಿಗಳ ಒತ್ತಡ ಹೇರಿ ಹಳ್ಳ ಹಿಡಿಸಿದ ಆರೋಪವೂ ಕೇಳಿ ಬಂದಿದೆ.
ಇಲ್ಲದ ಜಮೀನು,ಕಟ್ಟಡಗಳಿಗೆ ಅಕ್ರಮವಾಗಿ ಅಭಿವೃದ್ಧಿ ಹಕ್ಕು (ಟಿಡಿಆರ್) ಪತ್ರ ಪಡೆದು,ಆ ಮೂಲಕ ರಿಯಲ್ ಎಸ್ಟೇಟ್ ಉದ್ಯಮಿ ಗಳು ಎಲ್ಲೆಂದರಲ್ಲಿ ಕಟ್ಟಡ ಕಟ್ಟಿರುವ ಪ್ರಕರಣಗಳು ತನಿಖೆಯಲ್ಲಿ ಪತ್ತೆಯಾಗಿತ್ತು.ಈಗ ನಿಯಮ ತಿದ್ದುಪಡಿಯಾಗು ವುದರಿಂದ ಮತ್ತೆ ಟಿಡಿಆರ್ ದಂಧೆಗೆ ಪೂರಕ ವಾತಾವರಣ ಸೃಷ್ಟಿಯಾಗಲಿದೆ ಎಂಬ ಆರೋಪ ಕೇಳಿ ಬಂದಿದೆ.ಮತ್ತೆ ಒಂದೇ ಏಜೆನ್ಸಿಗೆ ಟಿಡಿ ಆರ್ ನೀಡುವ ಅಧಿಕಾರ ಕಲ್ಪಿಸುವ ಮೂಲಕ ಈ ಹಿಂದೆ ಸಂಭವಿಸಿದ ಟಿಡಿಆರ್ ಹಗರಣ ಮರುಕಳಿಸುವ ಸಾಧ್ಯತೆ ಹೆಚ್ಚಿದೆ ಎಂದು ಹೇಳಲಾಗಿದೆ.

ಇದುವರೆಗೆ ಬಿಬಿಎಂಪಿ,ಬಿಡಿಎಗಳು ಎಷ್ಟು ಟಿಡಿಆರ್ ನೀಡಿವೆ : ಟಿಡಿಆರ್ ವಿತರಣೆ,ಬಳಕೆ ಎಷ್ಟು: 2007 ರಿಂದ 2015ರ ತನಕ ಬಿಬಿಎಂಪಿ ಒಟ್ಟು 2.37 ಕೋಟಿ ಚದರ ಅಡಿ ಸ್ವಾಧೀನಪಡಿ ಸಿಕೊಂಡ ಜಾಗಕ್ಕೆ ಟಿಡಿಆರ್ ವಿತರಣೆ ಮಾಡಿತ್ತು.ಅಂದರೆ ಸುಮಾರು 22.08 ಲಕ್ಷ ಚದರಡಿ ಟಿಡಿಆರ್‌ಸಿ ವಿತರಿಸಿತ್ತು.ಇದರ ಮಾರುಕಟ್ಟೆ ಮೌಲ್ಯ,ಟಿಡಿಆರ್ ಮೌಲ್ಯದ ಬಗ್ಗೆ ಮಾಹಿತಿ ಲಭ್ಯವಾಗಿಲ್ಲ.
2017 ರಿಂದ ಈಚೆಗೆ ಬೆಂಗಳೂರು ವ್ಯಾಪ್ತಿಯಲ್ಲಿ ಬಿಡಿಎನೇ ಟಿಡಿಆರ್ ವಿತರಿಸುತ್ತಿದೆ.ಅದರಂತೆ ಬಿಡಿಎ 2021 ಜೂನ್ ವರೆಗೆ ವಿವಿಧ ಕಾಮಗಾರಿಗಾಗಿ ಸ್ವಾಧೀನ ಪಡಿಸಲಾದ ಸುಮಾರು 2,30,314. 56 ಚದರ ಮೀಟರ್ ಭೂಮಿಗೆ ಟಿಡಿಆರ್ ವಿತರಣೆ ಮಾಡಿರುವ ಮಾಹಿತಿ ಇದೆ.
ಇನ್ನು ಸುಮಾರು 58,383 ಚದರ ಮೀಟರ್ ಜಮೀನಿ ನಷ್ಟಕ್ಕೂ ಟಿಡಿಆರ್ ಪ್ರಮಾಣ ಪತ್ರವನ್ನು ಮಾಲೀಕರಿಗೆ ಮಂಜೂರು ಮಾಡಲಾಗಿದೆ.ಬಿಡಿಎ ವ್ಯಾಪ್ತಿಯಲ್ಲಿ ಸುಮಾರು 1,69,397.64 ಚ.ಮೀಟರ್ ಟಿಡಿಆರ್ ಭೂಮಿಯನ್ನು ಬಳಸಲಾಗಿದೆ ಎಂದು ಬಿಡಿಎ ತಿಳಿಸಿದೆ.
ಈ ಟಿಡಿಆರ್ ವಿತರಣೆಗೆ ಅಡ್ಡಿ ಆತಂಕ ನಿವಾರಣೆಗಾಗಿ ಕಾಯ್ದೆಗೆ ತಿದ್ದುಪಡಿ ತಂದು ಕಾಯ್ದೆ ಜಾರಿ ಮಾಡಿದ್ದಾರೆ.ಈಗ ಬೇಕಾಬಿಟ್ಟಿ ಟಿಡಿಆರ್ ವಿತರಣೆಗೆ ಸರ್ಕಾರ ವೇದಿಕೆ ಕಲ್ಪಿಸಿದೆ.ಅದಕ್ಕೆ ಪ್ರಮುಖ ಕಾರಣ ಟಿಡಿಆರ್ ಯೋಜನೆಯ ಪ್ರಮುಖ ಫಲಾನುಭವಿಗಳು ಪ್ರಭಾವಿ ರಾಜಕಾರಣಿಗಳು,ಅವರ ಮಕ್ಕಳು,ಸರ್ಕಾರದಲ್ಲಿರುವವರ ಕುಟುಂಬ ಸದಸ್ಯರುಗಳು ಎನ್ನಲಾಗಿದೆ.

ಇಂದು ಬಿಬಿಎಂಪಿ,ಬಿಡಿಎ ಮುಂದೆ-ಮುಡಾ,ದೂಡಾ,ಬುಡಾ,ಕುಡಾ,ಶುಡಾಗೂ ಎಂಟ್ರಿ :
ಇದು ಕೇವಲ ಬೆಂಗಳೂರು ನಗರ ಪ್ರದೇಶಕ್ಕಷ್ಟೆ ಸೀಮಿತವಾಗಿಲ್ಲ.ಮುಂದಿನ ದಿನಗಳಲ್ಲಿ ರಾಜ್ಯದ ಇತರೆ ನಗರಾಭಿವೃದ್ದಿ ಪ್ರಾಧಿ ಕಾರಗಳಾದ ಮೈಸೂರು ನಗರಾಭಿವೃದ್ದಿ ಪ್ರಾಧಿಕಾರ(ಮುಡಾ), ದಾವಣಗೆರೆ ನಗರಾಭಿವೃದ್ದಿ ಪ್ರಾಧಿಕಾರ(ದೂಡಾ),ಶಿವಮೊಗ್ಗ ನಗರಾಭಿವೃದ್ದಿ ಪ್ರಾಧಿಕಾರ (ಶುಡಾ),ಹುಬ್ಬಳ್ಳಿ-ಧಾರವಾಡ ನಗರಾಭಿವೃದ್ದಿ ಪ್ರಾಧಿಕಾರ(ಹುಡಾ),ಬೆಳಗಾವಿ ನಗರಾಭಿವೃದ್ದಿ ಪ್ರಾಧಿ ಕಾರ(ಬುಡಾ)ಕುಲಬುರಗಿ ನಗರಾಭಿವೃದ್ದಿ ಪ್ರಾಧಿಕಾರ ವ್ಯಾಪ್ತಿಯಲ್ಲಿಯೂ ಟಿಡಿಆರ್ ಭೂತ ಎದುರಾಗುವ ಸಾಧ್ಯತೆ ಇದೆ.