Search

MANTRALAYA TEMPLE: ಮಂತ್ರಾಲಯದ ರಾಯರ ಮಠದಲ್ಲಿ ಹುಂಡಿ ಎಣಿಕೆ ಕಾರ್ಯ: ಕಳೆದ ಬಾರಿಗಿಂತ ಈ ಬಾರಿ ಅಧಿಕ ಗಳಿಕೆ

ರಾಯಚೂರು: ಜಗತ್ಪಸಿದ್ದ ಮಂತ್ರಾಲಯ ರಾಯರ ಮಠದಲ್ಲಿ ಹುಂಡಿ ಎಣಿಕೆ ಕಾರ್ಯ ಆರಂಭಗೊಂಡಿದೆ. ಗುರುವೈಭವೋತ್ಸವ ಹಿನ್ನೆಲೆಯಲ್ಲಿ ಮಂತ್ರಾಲಯ ಮಠದಲ್ಲಿ ಕಳೆದ 29 ದಿನಗಳಲ್ಲಿ ಸಾವಿರಾರು ಭಕ್ತರು ಆಗಮಿಸಿದ್ದರು.

ಆದ್ದರಿಂದ ಇಂದು ಹುಂಡಿ ಎಣಿಕೆ ಕಾರ್ಯ ಆರಂಭವಾಗಿದ್ದು, 29 ದಿನದ ಹುಂಡಿ ಹಣ 2 ಕೋಟಿ 30 ಲಕ್ಷ 26 ಸಾವಿರ ರೂಪಾಯಿ ದೇಣಿಗೆ ಸಂಗ್ರಹಿಸಲಾಗಿದೆ ಎಂದು ತಿಳಿದುಬಂದಿದೆ.

ಕಳೆದ ಬಾರಿಗಿಂತ ಈ ಬಾರಿ ಅಧಿಕ ದೇಣಿಗೆ ಸಂಗ್ರಹವಾಗಿದೆ ಎಂದು ಆಡಳಿತ ಮಂಡಳಿ ತಿಳಿಸಿದ್ದು, 81 ಗ್ರಾಂ ಬಂಗಾರ, 848 ಗ್ರಾಂ ಬೆಳ್ಳಿ ಭಕ್ತರಿಂದ ರಾಯರ ಮಠಕ್ಕೆ ಅರ್ಪಣೆಯಾಗಿದೆ ಎಂದು ತಿಳಿದುಬಂದಿದೆ.
ವಿವಿಧ ರಾಜ್ಯಗಳಿಂದ ರಾಯರ ಮಠಕ್ಕೆ ಭಕ್ತ ಸಾಗರ ಹರಿದು ಬರುತ್ತಿದೆ.

ಸಾಲು ಸಾಲು ರಜೆ ಹಿನ್ನೆಲೆಯಲ್ಲಿ ಭಕ್ತರು ಅಧಿಕ ಸಂಖ್ಯೆಯಲ್ಲಿ ಆಗಮಿಸುತ್ತಿದ್ದಾರೆ. ಈ ಹಿನ್ನೆಲೆಯಲ್ಲಿ ಈ ಬಾರಿ ಅಧಿಕ ಮಟ್ಟದಲ್ಲಿ ಹುಂಡಿ ಭರ್ತಿಯಾಗಿದೆ ಎಂದು ಮಂತ್ರಾಲಯದ ಆಡಳಿತ ಮಂಡಳಿಯವರು ತಿಳಿಸಿದ್ದಾರೆ.

More News

You cannot copy content of this page