Search

RANGAPANCHAMI SAMBRAMA: ಹುಬ್ಬಳ್ಳಿಯಲ್ಲಿ ಮಹಾಸಂಗಮ: 45 ವರ್ಷಗಳ ಬಳಿಕ ನಡೆಯಲಿದೆ ಐತಿಹಾಸಿಕ ರಂಗಪಂಚಮಿ

ಹುಬ್ಬಳ್ಳಿ: ರಂಗ ಪಂಚಮಿ ಸಂಭ್ರಮ ಅಂದರೆ ಹುಬ್ಬಳ್ಳಿಯ ರಂಗಪಂಚಮಿ ಎಂಬುವಂತ ಹೆಸರಿದೆ. ಈ ನಿಟ್ಟಿನಲ್ಲಿ ಈಗ ಮತ್ತೊಂದು ಐತಿಹಾಸಿಕತೆ ರಂಗಪಂಚಮಿ ಆಚರಣೆ ಸಾಕ್ಷಿಯಾಗಲಿದೆ. ಎರಡು ಕಾಮಣ್ಣನ ಸಂಘಟನೆಗಳು ಸಂಗಮವಾಗಲಿದ್ದು, ಮಹಾ ಕ್ಷಣಗಳಿಗೆ ಈ ಸಲದ ಆಚರಣೆ ಸಾಕ್ಷಿಯಾಗಲಿದೆ. 45 ವರ್ಷಗಳ ನಂತರ ಬೃಹತ್ ಆಚರಣೆ ನಡೆಯಲಿದೆ.

ಹಳೇ ಹುಬ್ಬಳ್ಳಿ ಮೇದಾರ ಸಮಾಜ ಮತ್ತು ಹೊಸ ಹುಬ್ಬಳ್ಳಿ ಮೇದಾರ ಸಮಾಜದ ಕಾಮಣ್ಣನ ದಿಗ್ಗಜರ ಮಹಾಸಂಗಮ ನಾಳೆ ನಡೆಯಲಿದೆ. ಹೌದು.. ಹುಬ್ಬಳ್ಳಿಯಲ್ಲಿ ನಾಳೆ ನಡೆಯುವ ರಂಗ ಪಂಚಮಿಯ ದಿನದಂದು ಹಳೇಹುಬ್ಬಳ್ಳಿ ಮತ್ತು ಹೊಸ ಹುಬ್ಬಳ್ಳಿ ಮೇದಾರ ಸಮಾಜಗಳ ವತಿಯಿಂದ ಶತಶತಮಾನಗಳ ಇತಿಹಾಸವುಳ್ಳ 22 ಫೂಟನ ಬೃಹತ ಆಕಾರದ ಬಿದರಿನ ಕಾಮಣ್ಣನನ್ನು ಪ್ರತಿಷ್ಠಾಪಿಸಲಾಗಿದೆ. ಶತ ಶತಮಾನಗಳಿಂದ ಈ ಮಹಾಸಂಗಮವು ನಡೆದುಕೊಂಡು ಬರುತ್ತಿದ್ದು ಕಾರಣಾಂತರಗಳಿಂದ ಕಳೆದ 45 ವರ್ಷಗಳಿಂದ ಈ ಸಂಗಮವು ನಡೆಯದೇ ನಿಂತು ಹೋಗಿತ್ತು. ಈಗ ಮಹತ್ವದ ಮಹಾಸಂಗಮ ನಡೆಯಲಿದೆ.

ಬೃಹತ ಆಕಾರದ ಬಿದರಿನ ಕಾಮಣ್ಣಗಳ ಮಹಾಸಂಗಮದೊಂದಿಗೆ ಹೊಳಿ ಹಬ್ಬ ಆಚರಿಸಲು ಸಮಾಜದ ಗುರು-ಹಿರಿಯರು ಹಾಗೂ ಮುಖಂಡರು ತಿರ್ಮಾನಿಸಿರುತ್ತಾರೆ. ಇವೆರಡೂ ಕಾಮಣ್ಣಗಳು ಬೇರೆ ಬೇರೆ ಮುಖ್ಯ ರಸ್ತೆಗಳಿಂದ ಮೆರವಣಿಗೆಯ ಮುಖಾಂತರ ಮಧ್ಯಾಹ್ನ 2-00 ಗಂಟೆಗೆ ಅಷ್ಟೋತ್ತಿಗೆ ದುರ್ಗದ ಬೈಲ್ ಸರ್ಕಲ್‌ನಲ್ಲಿ ಆಗಮಿಸಿ ಎದುರು ನಿಂತುಕೊಳ್ಳಲಿವೆ. ಈ ದೃಶ್ಯವನ್ನು ನೋಡುವುದೇ ಕಣ್ಣಿಗೆ ಒಂದು ಹಬ್ಬ. ಈ ಇಬ್ಬರೂ ದಿಗ್ಗಜರ ಮಹಾಸಂಗಮದ ಮೂಲಕ ಸೌರ್ಹಾದಯುತ ರಂಗಪಂಚಮಿಯನ್ನು ವಿಜೃಂಬಣೆಯಿಂದ ಆಚರಿಸಲಾಗುತ್ತದೆ.

More News

You cannot copy content of this page