Search

BEER PRICE HIKE: ಬಿಯರ್ ಪ್ರಿಯರಿಗೆ ಬೆಲೆ ಏರಿಕೆಯ ಕಿಕ್: ಪ್ರತಿ ಬಾಟಲ್ ಗೆ ಸುಮಾರು 15 ರೂಪಾಯಿ ಏರಿಕೆಯ ಶಾಕ್

ಬೆಂಗಳೂರು: ಬೆಂಗಳೂರಿನಲ್ಲಿ ಮದ್ಯ ಮಾರಾಟಗಾರರು ಸಿಡೆದೆದ್ದಿದ್ದು, ಕರ್ನಾಟಕ ರಾಜ್ಯ ಪಾನೀಯ ನಿಗಮ ನಿಯಮಿತ ಮುಂದೆ ಮದ್ಯ ಮಾರಾಟಗಾರರು ಪ್ರತಿಭಟನೆ ನಡೆಸಿದರು.
KSBCL ನ ನೂತನ ಸಾಫ್ಟ್‌ವೇರ್ ಖಂಡಿಸಿ ಪ್ರತಿಭಟನೆ ನಡೆಸಿದ ಪ್ರತಿಭಟನಾಕಾರರು, ವೆಬ್ ಇಂಡೆಂಟಿಂಗ್ ಅನ್ನು ತೆಗೆದುಹಾಕಬೇಕೆಂದು ಆಗ್ರಹಿಸಿದರು. ಬೆಂಗಳೂರು ನಗರ ಮದ್ಯ ವ್ಯಾಪಾರಿಗಳ ಸಂಘದಿಂದ ತೀವ್ರ ಆಕ್ರೋಶ ವ್ಯಕ್ತಪಡಿಸಿದರು.
ಮದ್ಯ ಪ್ರಿಯರಿಗೆ ಬೆಲೆ ಏರಿಕೆ ಶಾಕ್
ಬಜೆಟ್ ನಲ್ಲಿ ಮದ್ಯದ ಮೇಲೆ ಯಾವುದೇ ತೆರಿಗೆ ಹಾಕಿಲ್ಲದಿದ್ದೂ ಕೂಡ ದರ ಏರಿಕೆ ಶಾಕ್ ಮದ್ಯಪ್ರಿಯರಿಗೆ ಆಗಿದೆ. ಬಿಯರ್ ಉತ್ಪಾದನೆ ಕಂಪನಿಗಳಿಂದ ಬಿಯರ್ ಪ್ರಿಯರಿಗೆ ದರ ಏರಿಕೆ ಕಿಕ್ ನೀಡಿದೆ. ಬಾರ್ಲಿ ಸೇರಿದಂತೆ ಬಿಯರ್ ಉತ್ಪಾದನೆಗೆ ಬಳಸುವ ಅಗತ್ಯವಸ್ತುಗಳ ಬೆಲೆ ಏರಿಕೆ ಹಿನ್ನೆಲೆಯಲ್ಲಿ ಬಿಯರ್ ಬೆಲೆಯಲ್ಲಿ ಏರಿಕೆ ಕಂಡಿದೆ.

ಈಗಾಗ್ಲೇ ಸದ್ದಿಲ್ಲದೆ ಪ್ರತಿ ಕೇಸ್ ಮೇಲೆ ಮೇಲೆ 10 ರಿಂದ 15 ರೂಪಾಯಿ ಬಿಯರ್ ಬೆಲೆಯನ್ನು ಬಿಯರ್ ಉತ್ಪಾದನಾ ಕಂಪನಿಗಳು ಮಾಡಿವೆ. ಇದಲ್ಲದೆ, ಪ್ರತೀ ಬಿಯರ್ ಬಾಟಲ್ ಗೆ 5 ರೂಪಾಯಿ ಏರಿಕೆಯಾಗಲಿದೆ. ಏಪ್ರಿಲ್ 10ರಿಂದ ಎಲ್ಲಾ ಬ್ರಾಂಡ್ ಬಿಯರ್ ಮೇಲೆ ಪರಿಷ್ಕೃತ ದರ ಜಾರಿಯಾಗಲಿದೆ.

ಬಿಯರ್ ತಯಾರಿಗೆ ಬಳಸಲಾಗುತ್ತಿರುವ ಬಾರ್ಲಿಯನ್ನು ರಷ್ಯಾ ಹಾಗೂ ಉಕ್ರೇನ್ ನಿಂದ ಆಮದು ಮಾಡಿಕೊಳ್ಳಲಾಗುತ್ತಿದ್ದು, ಯುದ್ದದ ಪರಿಣಾಮ ಬಿಯರ್ ಮೇಲೆ ಆಗಿದೆ. ಇದಲ್ಲದೆ, ಇತರ ಕಚ್ಚಾಸಾಮಗ್ರಿಗಳ ಬೆಲೆಯೂ ಏರಿಕೆಗೆ ಕಾರಣವಾಗಿದೆ.
ಪೆಟ್ರೋಲ್ ಡೀಸೆಲ್ ದರ ಹೆಚ್ಚಳ ಹಿನ್ನೆಲೆ ಸಾಗಣೆ ವೆಚ್ಚ ಏರಿಕೆ
ಇವೆಲ್ಲದರ ಜತೆ ಕಳೆದ ಮೂರು ವರ್ಷಗಳ ಕಾಲ ಕೋವಿಡ್ ನಿಂದಾಗಿ ಉಂಟಾದ ನಷ್ಟ ತುಂಬಿಸಿಕೊಳ್ಳಲು ಬೆಲೆ ಏರಿಕೆ ಮಾಡಲಾಗಿದೆ ಎಂದು ಬೆಂಗಳೂರು ಮದ್ಯ ಮಾರಾಟಗಾರರ ಕಾರ್ಯದರ್ಶಿ ಕರುಣಾಕರ ಹೆಗಡೆ ಆರೋಪಿಸಿದ್ದಾರೆ.

More News

You cannot copy content of this page