Search

UNION MINISTER NARAYANSWAMY: ಸಮಾಜದಲ್ಲಿ ವಿಷ ಹಿಂಡುವ ಕೆಲಸ ಯಾರೂ ಮಾಡಬಾರದು: ಕೇಂದ್ರ ಸಚಿವ ಎ ನಾರಾಯಣ ಸ್ವಾಮಿ ಅಸಮಾಧಾನ

ಚಿತ್ರದುರ್ಗ: ಅಝಾನ್ ಇರಬಹುದು, ಹಿಜಾಬ್ ಇರಬಹುದು ಇವುಗಳ ಬಗ್ಗೆ ಚರ್ಚೆ ತುಂಬಾ ಆಗಿದೆ, ಇದು ಅವಶ್ಯಕತೆ ಇರಲಿಲ್ಲ, ಸಮಾಜದಲ್ಲಿ ವಿಷ ಹಿಂಡುವ ಕೆಲಸ ಯಾರೂ ಕೂಡ ಮಾಡಬಾರದು ಎಂದು ಪರೋಕ್ಷವಾಗಿ ತಮ್ಮ ಪಕ್ಷದ ನಾಯಕರ ವಿರುದ್ಧ ಕೇಂದ್ರ ಸಚಿವ ಎ ನಾರಾಯಣ ಸ್ವಾಮಿ ಅಸಮಾಧಾನ ವ್ಯಕ್ತಪಡಿಸಿದರು.
ಚಿತ್ರದುರ್ಗದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಸಮಾಜ ವಿರೋಧಿ ಚಟುವಟಿಕೆ ನಡೆಯುತ್ತಿದೆ, ಸಮಾಜ ಬೆಳೆದಂತೆ ಪರಿವರ್ತನೆ ಆಗಬೇಕು ಎಂದು ತಿಳಿಸಿದ ಅವರು ಧ್ವನಿವರ್ಧಕದ ಕುರಿತು ಹಲವರಿಗೆ ಗೊತ್ತಿರಲಿಲ್ಲ. ಸೌಂಡ್ ಎಷ್ಟು ಮೀಟರ್ ಇರಬೇಕು, ಅದರ ಹಾನಿ ಏನು ಎಂದು ಗೊತ್ತಿರಲಿಲ್ಲ. ವಿಜ್ಞಾನ ಬೆಳೆದಂತೆ ನಾವು ಆ ದೃಷ್ಟಿಯಲ್ಲಿ ಚರ್ಚೆಗಳು ನಡೆಯುತ್ತಿದೆ ಎಂದರು.
ಈ ಕುರಿತು ಸಿಎಂ ಸರಿಯಾದ ನಿರ್ಧಾರ ತೆಗೆದುಕೊಳ್ಳುತ್ತಾರೆ, ಹಲಾಲ್, ಇಜಾಬ್, ಜಟ್ಕಾ ಎಲ್ಲಾ ಚರ್ಚೆ ನಡೆದಿದೆ, ಎಲ್ಲಿ ಗಲಭೆ ಆಗಿಲ್ಲ, ಗಲಭೆ ಸೃಷ್ಟಿಗೆ ಸಿದ್ದರಾಮಯ್ಯ ದಾಖಲೆ ನೀಡಲಿ ಎಂದು ಒತ್ತಾಯಿಸಿದ ಅವರು. ಸದನದಲ್ಲಿ ಎಲ್ಲಾ ಚರ್ಚೆಗೆ ಅವಕಾಶ ಇತ್ತು, ಯಾರು ನಿಮಗೆ ಅಡ್ಡಿಪಡಿಸಿದ್ದರು ಎಂದು ಹೇಳಿದ್ದಾರೆ.

ಸದನದಲ್ಲಿ ನೀನು ಯಾರನ್ನು ಲವ್ ಮಾಡಿದ್ದೆ, ಯಾರ ಬಳಿ ಮಾತಾಡಿದ್ದೆ ಇದು ಚರ್ಚೆ ಆಯ್ತು, ಸಮಾಜದ ಸಂಕಷ್ಟಗಳ ಚರ್ಚೆಗಳು ನಡೆಯಬೇಕಿತ್ತು, ಯಾವ ಯೋಜನೆ ಹಿನ್ನಡೆ ಆಗಿದೆ, ಸಲಹೆ ನೀಡಬೇಕಿತ್ತು, ನಮ್ಮ ಅಜೆಂಡಾ ಹಿಂದುತ್ವ, ರಾಷ್ಟ್ರೀಯತೆ, BJP ಅಧಿಕಾರಕ್ಕೆ ಬಂದ ಬಳಿಕ ಕಾಂಗ್ರೆಸ್ 60 ವರ್ಷದಲ್ಲಿ ಆದ ಗಲಭೆ ನಮ್ಮ ಅವಧಿಯಲ್ಲಿ ನಡೆದಿಲ್ಲ ಎಂದರು.

ದೇಶವನ್ನ ಪ್ರೀತಿಸುವ ಪ್ರತಿಯೊಬ್ಬ ವ್ಯಕ್ತಿಯೂ ಹಿಂದು. ಅದಕ್ಕೆ ನಾಲ್ಕು ರಾಜ್ಯದಲ್ಲಿ ಜನ ಮತಹಾಕಿದ್ದಾರೆ ಎಂದು ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ವಿರುದ್ಧ ಆಕ್ರೋಷ ವ್ಯಕ್ತಪಡಿಸಿದರು.

More News

You cannot copy content of this page