Search

HOMBALE FILMS AND KICHCHA SUDEEP: ಟು ನ್ಯೂ ಬಿಗಿನಿಂಗ್ ಎಂದಿದ್ಯಾಕೆ ಕಾರ್ತಿಕ್: ಕಿಚ್ಚ ಸುದೀಪರೊಂದಿಗೆ ಸಿನಿಮಾ ಮಾಡಲು ಚಿಂತಿಸಿದೆಯಾ ಹೊಂಬಾಳೆ ಫಿಲ್ಸಂ..?

ಕಾಂತಾರ ಸಿನಿಮಾ ಸಕ್ಸಸ್ ಬೆನ್ನಲ್ಲೇ ಸಿನಿಮಾ ನಿರ್ಮಾಣ ಸಂಸ್ಥೆ ಹೊಂಬಾಳೆ ಫಿಲಂಸ್ ಮತ್ತೋರ್ವ ಸ್ಟಾರ್ಟ್ ನಟನ ಸಿನಿಮಾ ನಿರ್ಮಾಣಕ್ಕೆ ಮುಂದಾಗಿದೆ ಎನ್ನುವ ಹಿಂಟ್ ಸಿಕ್ಕಿದೆ.
ಹೊಂಬಾಳೆ ಫಿಲಂಸ್ ಕಾರ್ಯಕಾರಿ ನಿರ್ಮಾಪಕ ಕಾರ್ತಿಕ್ ಗೌಡ ಮಾಡಿರುವ ಟ್ವೀಟ್ ಸೋಶಿಯಲ್ ಮೀಡಿಯಾದಲ್ಲಿ ಸಖತ್ ಹಲ್ ಚಲ್ ಮೂಡಿಸಿದೆ. ಸುದೀಪ್ ಜೊತೆ ಇರುವ ಪೋಟೋ ಶೇರ್ ಮಾಡಿಕೊಂಡಿರುವ ಕಾರ್ತಿಕ್ ಗೌಡ, ಟು ನ್ಯೂ ಬಿಗಿನಿಂಗ್ ಎಂದು ಬರೆದುಕೊಂಡಿದ್ದಾರೆ.
ಈ ಮೂಲಕ ಬಾದ್ ಷಾ ಕಿಚ್ಚ ಸುದೀಪ್ ಮುಂದಿನ ಸಿನಿಮಾವನ್ನು ಹೊಂಬಾಳೆ ನಿರ್ಮಾಣ ಮಾಡುತ್ತಿದೆ ಎನ್ನುವ ಸುಳಿವು ಸಿಕ್ಕಿದೆ. ಈ ಸುದ್ದಿ ಕೇಳಿ ಸುದೀಪ್ ಫ್ಯಾನ್ಸ್ ಫುಲ್ ಖುಷ್ ಆಗಿದ್ದಾರೆ.

ಕೆಜಿಎಫ್ ಸಿನಿಮಾ ನಂತರ ಕನ್ನಡದ ಸಿನಿಮಾ ನಿರ್ಮಾಣ ಸಂಸ್ಥೆ ಹೊಂಬಾಳೆ ಫಿಲಂಸ್ ಹೆಸರು ಭಾರತೀಯ ಚಿತ್ರರಂಗದಲ್ಲಿ ಖ್ಯಾತಿ ಗಳಿಸಿದೆ. ಈಗಾಲೇ ಸಲಾರ್, ಜೂ.ಎನ್ ಟಿ ಆರ್, ಫಾಹದ್ ಫಾಸಿಲ್ ಸಿನಿಮಾ ಸೇರಿದಂತೆ ಹಲವು ಪ್ಯಾನ್ ಇಂಡಿಯಾ ಸಿನಿಮಾಗಳನ್ನು ಹೊಂಬಾಳೆ ಫಿಲಂಸ್ ನಿರ್ಮಾಣ ಮಾಡುತ್ತಿದೆ.

ರಿಷಬ್ ಶೆಟ್ಟಿ ನಿರ್ದೇಶಿಸಿ ನಟಿಸಿರುವ ಕಾಂತರ ಸಿನಿಮಾ ಕೂಡ ಹೊಂಬಾಳೆ ಫಿಲಂಸ್ ಬ್ಯಾನರ್ ನಡಿ ನಿರ್ಮಾಣವಾಗಿದ್ದು ಕೆಜಿಎಫ್ ನಂತರ ಮತ್ತೊಂದು ಬಹುದೊಡ್ಡ ಸಕ್ಸಸ್ ಕಾಂತಾರದಿಂದ ಹೊಂಬಾಳೆ ಫಿಲಂಸ್ ಸಿಕ್ಕಿದೆ. ಈ ಸಕ್ಸಸ್ ಬೆನ್ನಲ್ಲೇ ಮತ್ತೊಬ್ಬ ಸ್ಟಾರ್ ನಟನ ಸಿನಿಮಾ ನಿರ್ಮಾಣಕ್ಕೆ ಮುಂದಾಗಿದೆ ಹೊಂಬಾಳೆ ಬ್ಯಾನರ್ ಎನ್ನಲಾಗ್ತಿದ್ದು, ಮತ್ತೊಂದು ಬೆಸ್ಟ್ ಸಿನಿಮಾ ತೆರೆ ಕಾಣುವ ನಿರೀಕ್ಷೆ ಸಿನಿ ಪ್ರೀಯರಲ್ಲಿ ಮೂಡಿದೆ.

More News

You cannot copy content of this page