Search

Dada Saheb Phalke Awards 2023 : ದಾದಾ ಸಾಹೇಬ್ ಫಾಲ್ಕೆ ಅಂತಾರಾಷ್ಟ್ರೀಯ ಚಿತ್ರೋತ್ಸವ ಪ್ರಶಸ್ತಿ ಪ್ರದಾನ ಸಮಾರಂಭ

ಮುಂಬೈ:ಫೆ21: ಮುಂಬೈಯಲ್ಲಿ ನಿನ್ನೆ ದಾದಾಸಾಹೇಬ್ ಫಾಲ್ಕೆ ಅಂತಾರಾಷ್ಟ್ರೀಯ ಚಲನಚಿತ್ರೋತ್ಸವ ಪ್ರಶಸ್ತಿ ಪ್ರದಾನ ಸಮಾರಂಭ ನಡೆಯಿತು. ಕಳೆದ ವರ್ಷ ತೆರೆಕಂಡು ಅಪಾರ ಯಶಸ್ಸು ಗಳಿಸಿದ ಕನ್ನಡದ ಚಿತ್ರ ಕಾಂತಾರ ಚಿತ್ರದ ನಟನೆ, ನಿರ್ದೇಶನಕ್ಕೆ ರಿಷಬ್ ಶೆಟ್ಟಿ ಅವರಿಗೆ 2023ನೇ ಸಾಲಿನ ಭರವಸೆಯ ನಟ ಪ್ರಶಸ್ತಿ ಸಿಕ್ಕಿದೆ.

‘ಈ ಪ್ರೀತಿ, ಪುರಸ್ಕಾರಕ್ಕೆ ನಾನು ಸದಾ ಚಿರಋಣಿ. ದಾದಾಸಾಹೇಬ್ ಫಾಲ್ಕೆ ಪ್ರಶಸ್ತಿ ಸಿಕ್ಕಿರುವುದು ನನಗೆ ಇನ್ನಷ್ಟು ಸಿನೆಮಾ ಮಾಡುವ,ನನ್ನ ಜವಾಬ್ದಾರಿಯನ್ನು ಹೆಚ್ಚಿಸಿದೆ’ ಎಂದು ರಿಷಬ್ ಶೆಟ್ಟಿ ಬರೆದುಕೊಂಡಿದ್ದಾರೆ.
ಕಾಂತಾರ ಚಿತ್ರವನ್ನು ನಿರ್ದೇಶಿಸಿ ನಟಿಸಿ ಡಿವೈನ್ ಸ್ಟಾರ್ ಎಂದು ಅಭಿಮಾನಿಗಳಿಂದ ಪ್ರೀತಿಯ ಬಿರುದು ಪಡೆದಿರುವ ರಿಷಬ್ ಶೆಟ್ಟಿ ದಾದಾ ಸಾಹೇಬ್ ಫಾಲ್ಕೆ ಪ್ರಶಸ್ತಿ ಪಡೆದಿದ್ದಾರೆ.
ಬಿಳಿ ಸೀರೆಯಲ್ಲಿ ಉಟ್ಟ ಆಲಿಯಾ ಅಂದವಾಗಿ ಕಾಣುತ್ತಿದ್ದರು. ಈ ಸಂದರ್ಭಕ್ಕಾಗಿ ರೇಖಾ ಅವರು ತಮ್ಮ ನೆಚ್ಚಿನ ಕಾಂಜೀವರಂ ಸೀರೆಯನ್ನು ಧರಿಸಿ ಬಂದು ಕಂಗೊಳಿಸಿದರು.
ಹಸಿರು ಗೌನ್ ಮತ್ತು ನೆಕ್ಲೇಸ್ ನಲ್ಲಿ ಮಿಂಚಿದ ವಿದ್ಯಾ ಬಾಲನ್.
ದಾದಾಸಾಹೇಬ್ ಪಾಲ್ಕೆ ಪ್ರಶಸ್ತಿ ಪಡೆದ ವಿವೇಕ್ ಅಗ್ನಿಹೋತ್ರಿ.
ಅತ್ಯುತ್ತಮ ನಟ 2023 ವಿಮರ್ಶಕರ ಆಯ್ಕೆ ಪ್ರಶಸ್ತಿ ಪಡೆದ ವರುಣ್ ಧವನ್.
ಅತ್ಯುತ್ತಮ ನಟಿ ಪ್ರಶಸ್ತಿ ಗಳಿಸಿದ ಆಲಿಯಾ ಭಟ್.
ಪಿಂಕ್ ಸಲ್ವಾರ್ ಕಮೀಜ್ ನಲ್ಲಿ ಮಗನೊಂದಿಗೆ ಬಂದ ರೂಪಾ ಗಂಗೂಲಿ.

ಕಾಶ್ಮೀರಿ ಪಂಡಿತರ ಹಿಂಸೆಯ ಕಥೆಯನ್ನು ಒಳಗೊಂಡ ‘ದಿ ಕಾಶ್ಮೀರ್‌ ಫೈಲ್ಸ್‌’ ಸಿನಿಮಾಗೆ ಕೂಡಾ ಬೆಸ್ಟ್‌ ಫಿಲ್ಮ್‌ ವಿಭಾಗದಲ್ಲಿ ದಾದಾಸಾಹೇಬ್ ಫಾಲ್ಕೆ ಅಂತಾರಾಷ್ಟ್ರೀಯ ಚಿತ್ರೋತ್ಸವ ಪ್ರಶಸ್ತಿ ದೊರೆತಿದೆ. ನಿರ್ದೇಶಕ ವಿವೇಕ್‌ ರಂಜನ್‌ ಅಗ್ನಿಹೋತ್ರಿ, ಸೋಮವಾರ ನಡೆದ ಕಾರ್ಯಕ್ರಮದಲ್ಲಿ ಭಾಗವಹಿಸಿ ಪ್ರಶಸ್ತಿ ಸ್ವೀಕರಿಸಿದ್ದಾರೆ. ಕಾರ್ಯಕ್ರಮದ ಫೋಟೋಗಳು, ವಿಡಿಯೋವನ್ನು ತಮ್ಮ ಸೋಷಿಯಲ್‌ ಮೀಡಿಯಾದಲ್ಲಿ ಹಂಚಿಕೊಂಡಿದ್ದಾರೆ. 

ದಾದಾಸಾಹೇಬ್ ಫಾಲ್ಕೆ ಅಂತಾರಾಷ್ಟ್ರೀಯ ಚಿತ್ರೋತ್ಸವ 2023 ಪ್ರಶಸ್ತಿ ಪಡೆದವರ ಸಂಪೂರ್ಣ ವಿವರ

ಅತ್ಯುತ್ತಮ ಸಿನಿಮಾ: ದಿ ಕಾಶ್ಮೀರ್‌ ಫೈಲ್ಸ್‌

ಅತ್ಯುತ್ತಮ ನಿರ್ದೇಶಕ: ಆರ್‌. ಬಾಲ್ಕಿ – ಚುಪ್‌ ಸಿನಿಮಾ

ಅತ್ಯುತ್ತಮ ನಟ : ರಣಬೀರ್‌ ಕಪೂರ್‌ – ಬ್ರಹ್ಮಾಸ್ತ್ರ

ಅತ್ಯುತ್ತಮ ನಟಿ: ಆಲಿಯಾ ಭಟ್‌ – ಗಂಗೂಬಾಯಿ ಕಾಠಿಯಾವಾಡಿ

ಅತ್ಯುತ್ತಮ ಭರವಸೆ ನಟ: ರಿಷಬ್‌ ಶೆಟ್ಟಿ – ಕಾಂತಾರ

ಅತ್ಯುತ್ತಮ ಪೋಷಕ ನಟ: ಮನಿಷ್‌ ಪೌಲ್‌ – ಜುಗ್‌ ಜುಗ್‌ ಜಿಯೋ

ಭಾರತೀಯ ಸಿನಿಮಾರಂಗದ ಅತ್ಯುತ್ತಮ ಕೊಡುಗೆ: ರೇಖಾ

ಅತ್ಯುತ್ತಮ ವೆಬ್‌ ಸರಣಿ: ರುದ್ರ

ಕ್ರಿಟಿಕ್ಸ್‌ ಉತ್ತಮ ನಟ: ವರುಣ್‌ ಧವನ್‌ – ಭೇಡಿಯಾ

ವರ್ಷದ ಅತ್ಯುತ್ತಮ ಸಿನಿಮಾ: ಆರ್‌ಆರ್‌ಆರ್‌

ವರ್ಷದ ಅತ್ಯುತ್ತಮ ಧಾರಾವಾಹಿ: ಅನುಪಮಾ

ವರ್ಷದ ಬಹುಮುಖ ನಟ: ಅನುಪಮ್‌ ಖೇರ್‌ – ದಿ ಕಾಶ್ಮೀರ್‌ ಫೈಲ್ಸ್

ಅತ್ಯುತ್ತಮ ಕಿರುತೆರೆ ನಟ: ಜೈನ್‌ ಇಮಾಮ್‌ – ಫನಾ

‌ಅತ್ಯುತ್ತಮ ಕಿರುತೆರೆ ನಟಿ: ತೇಜಸ್ವಿ ಪ್ರಕಾಶ್‌ – ನಾಗಿನ್

ಅತ್ಯುತ್ತಮ ಗಾಯಕ: ಸಚೇತ್‌ ಟಂಡನ್‌ – ಮಾಯಿಯಾ ಮೈನು

‌ಅತ್ಯುತ್ತಮ ಗಾಯಕಿ: ‌ ನೇತಿ ಮೋಹನ್‌ – ಮೇರಿ ಜಾನ್

ಅತ್ಯುತ್ತಮ ಛಾಯಾಗ್ರಾಹಕ: ಪಿ.ಎಸ್‌. ವಿನೋದ್‌ – ವಿಕ್ರಮ್‌ ವೇದ

ದಾದಾಸಾಹೇಬ್ ಫಾಲ್ಕೆ ಅಂತಾರಾಷ್ಟ್ರೀಯ ಚಿತ್ರೋತ್ಸವ ಪ್ರಶಸ್ತಿ ಪಡೆದವರಿಗೆ ನೆಟಿಜನ್ಸ್‌ ಅಭಿನಂದನೆ ಸಲ್ಲಿಸುತ್ತಿದ್ದಾರೆ.

More News

You cannot copy content of this page