Search

IMPACT OF FREE BUS SCHEME: ಮುಗಿದ ಹುಂಡಿ ಹಣ ಎಣಿಕೆ: ಶ್ರೀ ಕ್ಷೇತ್ರ ಮಲೈ ಮಹದೇಶ್ವರ ದೇಗುಲದ ಹುಂಡಿಯಲ್ಲಿ 36 ದಿನದಲ್ಲಿ ಕೋಟಿ, ಕೋಟಿ ಹಣ

ಚಾಮರಾಜನಗರ : ರಾಜ್ಯದಲ್ಲಿ ಶಕ್ತಿ ಯೋಜನೆ ಜಾರಿಯಾದ ನಂತರ ದೇಗುಲಗಳು ತುಂಬಿ ತುಳುಕುತ್ತಿವೆ. ಅದರಂತೆಯೇ, ಚಾಮರಾಜನಗರ ಜಿಲ್ಲೆ ಹನೂರು ತಾಲೂಕಿನ ಶ್ರೀ ಕ್ಷೇತ್ರ ಮಲೈ ಮಹದೇಶ್ವರ ಬೆಟ್ಟದಲ್ಲಿ ಹುಂಡಿ ಏಣಿಕೆ ಕಾರ್ಯ ನಡೆಯಿತು.

ಕಳೆದ 36 ದಿನಗಳ ಅವಧಿಯಲ್ಲಿ 2.38 ಕೋಟಿ ಮಲೈ ಮಾದಪ್ಪ ಕಾಣಿಕೆಯಾಗಿ ಪಡೆದ ಹಣವಾಗಿದೆ. ಶುಕ್ರವಾರ ಬೆಳಗ್ಗೆಯಿಂದ ರಾತ್ರಿಯವರೆಗೂ ಹುಂಡಿ ಎಣಿಕೆ ಕಾರ್ಯ ನಡೆದಿತ್ತು. ಬೆಟ್ಟದ ಬಸ್ ನಿಲ್ದಾಣದ ಬಳಿಯ ವಾಣಿಜ್ಯ ಸಂಕೀರ್ಣದಲ್ಲಿ ಹುಂಡಿ ಎಣಿಕೆ ಕಾರ್ಯ ನಡೆಯಿತು.

ಶಕ್ತಿ ಯೋಜನೆಯ ಉಚಿತ ಪ್ರಯಾಣದ ಹಿನ್ನೆಲೆಯಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಮಹಿಳಾ ಭಕ್ತಾಧಿಗಳು ಭೇಟಿ ಕೊಟ್ಟ ಪರಿಣಾಮ ಹುಂಡಿ ತುಂಬಿ ತುಳುಕುತ್ತಿವೆ ಎಂದು ದೇಗುಲದ ಅರ್ಚಕರು ತಿಳಿಸಿದ್ದಾರೆ.

ಹುಣ್ಣಿಮೆ, ಅಮಾವಾಸ್ಯೆ ಹಾಗೂ ಸರ್ಕಾರಿ ರಜೆ ದಿನಗಳಂದು ಹೆಚ್ಚಿನ ಸಂಖ್ಯೆಯಲ್ಲಿ ದೇವಸ್ಥಾನಕ್ಕೆ ಭೇಟಿ ನೀಡುವ ಭಕ್ತಾಧಿಗಳು, ತಮ್ಮ ಇಷ್ಟಾರ್ಥ ಸಿದ್ಧಿಗಾಗಿ ಹರಕೆಯ ರೂಪದಲ್ಲಿ ಹಣ, ಚಿನ್ನ ಹಾಗೂ ಬೆಳ್ಳಿಗಳನ್ನು ಸಮರ್ಪಿಸಿದ್ದಾರೆ. 2,38,43,177 ರೂ. ನಗದು, 63 ಗ್ರಾಂ ಚಿನ್ನ ಹಾಗೂ 3.173 ಕೆ ಜಿ ಗ್ರಾಂ ಬೆಳ್ಳಿ ಸಂಗ್ರಹವಾಗಿದೆ.

More News

You cannot copy content of this page