Search

PM MODI AND QATAR PM MEET: ಪ್ರಧಾನಿ ಮೋದಿ ಕತಾರ್ ಪ್ರಧಾನಿಯೊಂದಿಗೆ ಮಹತ್ವದ ಮಾತುಕತೆ: ನಿವೃತ್ತ ಅಧಿಕಾರಿಗಳ ಬಿಡುಗಡೆ ನಂತರ ಮೊದಲ ಸಭೆ

ದೋಹಾ : ಯುಎಇ ಎರಡು ದಿನಗಳ ಪ್ರವಾಸದಲ್ಲಿರುವ ಪ್ರಧಾನಮಂತ್ರಿ ನರೇಂದ್ರ ಮೋದಿ ಅವರು ಕತಾರ್ ಪ್ರಧಾನಿ ಶೇಖ್ ಮೊಹಮ್ಮದ್ ಬಿನ್ ಅಬ್ದುಲ್ ರಹಮಾನ್ ಅಲ್ ಥಾನಿ ಅವರೊಂದಿಗೆ ಮಹತ್ವದ ದ್ವಿಪಕ್ಷೀಯ ಸಂಬಂಧ ವೃದ್ದಿ ಕುರಿತು ಮಾತುಕತೆ ನಡೆಸಿದರು.

ಕತಾರ್ ಪ್ರಧಾನಿ ಭೇಟಿ ಕುರಿತು ತಮ್ಮ ಸಾಮಾಜಿಕ ಜಾಲತಾಣದಲ್ಲಿ ಬರೆದುಕೊಂಡಿರುವ ಅವರು, ಪ್ರಧಾನಿ ಮೊಹಮ್ಮದ್ ಅವರೊಂದಿಗೆ ಉತ್ತಮ ಸಭೆ ನಡೆಸಲಾಗಿದೆ. ಭಾರತ ಮತ್ತು ಕತಾರ್ ಸ್ನೇಹ ಸಂಬಂಧವನ್ನು ಇನ್ನಷ್ಟು ಉತ್ತೇಜನ ನೀಡುವ ಸಂಬಂಧ ಮಾತುಕತೆ ನಡೆಸಲಾಗಿದೆ ಎಂದು ಬರೆದುಕೊಂಡಿದ್ದಾರೆ.
ಎರಡನೇ ಸುತ್ತಿನ ಭೇಟಿ ಇಂದು ನಡೆಯಲಿದ್ದು ಉಭಯ ದೇಶಗಳ ಸಂಬಂಧ ವೃದ್ದಿ ಪ್ರಾದೇಶಿಕ ಅಭಿವೃದ್ಧಿ ಮತ್ತು ಜಾಗತಿಕ ಸಂಸ್ಯೆಗಳ ಸಂಬಂಧ ಮಾತುಕತೆ ನಡೆಸಲಿದ್ದಾರೆ. ಬೇಹುಗಾರಿಕೆ ಪ್ರಕರಣದಲ್ಲಿ ಬಂಧನಕ್ಕೊಳಗಾಗಿದ್ದ ಭಾರತೀಯ ನೌಕಾಪಡೆಯ 8 ಮಂದಿ ಸಿಬ್ಬಂದಿಯನ್ನು ಕತಾರ್ ಬಿಡುಗಡೆ ಮಾಡಿದ ನಂತರ ಮೋದಿಯವರ ಭೇಟಿ ಬಹಳಷ್ಟು ಮಹತ್ವ ಪಡೆದುಕೊಂಡಿತ್ತು.

More News

You cannot copy content of this page