Search

BOEING PLANE IN TO A LUXURY VILLA: ವಿಮಾನವನ್ನೇ ವಿಲ್ಲಾವನ್ನಾಗಿಸಿದ ಉದ್ಯಮಿ: ಬೋಯಿಂಗ್ 737 ಇದೀಗ ಐಷಾರಾಮಿ ವಿಲ್ಲಾ

ಮಾಸ್ಕೋ: ರಷ್ಯಾದ ಉದ್ಯಮಿಯೊಬ್ಬರು ವಾಣಿಜ್ಯ ವಿಮಾನವನ್ನು ಐಷಾರಾಮಿ ವಿಲ್ಲಾವನ್ನಾಗಿ ಪರಿವರ್ತಿಸಿದ್ದಾರೆ, ಇದರ ವಿಡಿಯೋವನ್ನು ಉದ್ಯಮಿ ಆನಂದ್ ಮಹೀಂದ್ರಾ ಅವರು ತಮ್ಮ ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದು, ಕೆಲವು ಜನರು ತಮ್ಮ ಕಲ್ಪನೆಗಳನ್ನು ವಾಸ್ತವವನ್ನಾಗಿಸಿಕೊಳ್ಳಲು ಅದೃಷ್ಟವಂತರಾಗಿರುತ್ತಾರೆ ಎಂದು ಬರೆದುಕೊಂಡಿದ್ದಾರೆ.

ಫೆಲಿಕ್ಸ್ ಡೆಮಿನ್ ಎನ್ನುವ ವ್ಯಕ್ತಿ ಸಂಚಾರಕ್ಕೆ ಬಳಸದ ಇರುವ ಬೋಯಿಂಗ್ 737 ವಿಮಾನವನ್ನು ಐಷಾರಾಮಿ ವಿಲ್ಲಾವನ್ನಾಗಿ ಪರಿವರ್ತಿಸಿದ್ದಾರೆ ಎಂದು ತಿಳಿಸಿದ್ದಾರೆ. ಇದು ಡೆಮಿನ್ ಅವರ ಕಲ್ಪನೆಯಾಗಿತ್ತು. ಅದರಂತೆಯೇ ಅವರು ಖುದ್ದಾಗಿ ವಿಮಾನವನ್ನು ನಿರ್ಮಿಸಿದ್ದಾರೆ.

ಐಷಾರಾಮಿ ವಿಲ್ಲಾದಲ್ಲಿ ಸ್ವಿಮ್ಮಿಂಗ್ ಪೂಲ್, ಟೇರೇಸ್, ಎರಡು ವಿಶಾಲವಾದ ಮಲಗುವ ಕೋಣೆಗಳು, ಬಾರ್, ಸೋಫಾ ಬೆಡ್, ಲಿವಿಂಗ್ ರೂಮ್ ಮತ್ತು ನಡೆದಾಡಲು ವಿಶಾಲವಾದ ಜಾಗ ಇದೆ. ಮತ್ತು ವಿಮಾನದ ಕಾಕ್ ಪಿಟ್ ಏರಿಯಾವನ್ನು ಸ್ನಾನಗೃಹವನ್ನಾಗಿ ಪರಿವರ್ತಿಸಲಾಗಿದೆ. ಎಲ್ಲಾದ್ದಕ್ಕೂ ಹೈಟೆಕ್ ಸ್ಪರ್ಶ ನೀಡಲಾಗಿದೆಯಂತೆ.
ಲಭ್ಯವಾಗಿರುವ ಮಾಹಿತಿಯ ಪ್ರಕಾರ ಫೆಲಿಕ್ಸ್ ಡೆಮಿನ್ ಅವರು 2021ರಲ್ಲಿ ಬೋಯಿಂಗ್ 737 ವಿಮಾನವನ್ನು ಖರೀದಿಸಿ, ಮಾಸ್ಕೋದಲ್ಲಿಡಲಾಗಿದೆ.

2023ರಲ್ಲಿ ಇದನ್ನು ಐಷಾರಾಮಿ ಹೈಟೆಕ್ ವಿಲ್ಲಾವನ್ನಾಗಿ ಪರಿವರ್ತಿಸಿ ಅದನ್ನು ಇದೀಗ ಉಪಯೋಗಿಸುತ್ತಿದ್ದಾರೆ ಎಂದು ತಿಳಿದುಬಂದಿದೆ. ಇದರ ವಿಡಿಯೋವನ್ನು ಆನಂದ್ ಮಹೀಂದ್ರಾ ಅವರು ತಮ್ಮ ಸಾಮಾಜಿಕ ಜಾಲತಾಮದಲ್ಲಿ ಹಂಚಿಕೊಂಡಿದ್ದಾರೆ ಎಂದು ತಿಳಿದುಬಂದಿದೆ.

More News

You cannot copy content of this page