Search

IPL 2014: VIRAT KOHLI COMPLITES 16 YEARS WITH RCB AND DONE RECORD: ಒಂದೇ ತಂಡದ ಪರವಾಗಿ ಸುದೀರ್ಘ 16 ವರ್ಷ ಆಡಿರುವ ಕಿಂಗ್ ಕೊಹ್ಲಿ

ಬೆಂಗಳೂರು : ಒಂದೇ ತಂಡದ ಪರವಾಗಿ ಸುದೀರ್ಘ 16 ವರ್ಷ ಆಡಿರುವ ಕಿಂಗ್ ಕೊಹ್ಲಿ, ಇದೀಗ ಹೊಸ ಇತಿಹಾಸ ಬರೆಯಲಿದ್ದಾರೆ. ಈ ಬಾರಿ ಅಂದರೆ 17 ನೇ ಸೀಸನ್ ನಲ್ಲಿ ಟಿ-20 ಯಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದ ಪರವಾಗಿ ಆಡುವ ಅವರು ವಿಶ್ವ ದಾಖಲೆಗೆ ಮುಂದಾಗಿದ್ದಾರೆ.

ಒಂದೇ ತಂಡದಲ್ಲಿ 17 ವರ್ಷ ಆಡಿರುವ ಖ್ಯಾತಿ ಮತ್ತು ಲೀಗ್ ನಲ್ಲಿ ಅತೀ ಹೆಚ್ಚು ರನ್ ಬಾರಿಸಿದ, ಅತ್ಯಧಿಕ ಶತಕ ಸಿಡಿಸಿದ ಮತ್ತು ಅತೀ ಹೆಚ್ಚು ಅರ್ಧ ಶತಕ ಗಳಿಸಿದ ದಾಖಲೆಯೂ ಅವರ ಹೆಸರಿನಲ್ಲಿದೆ.
ಈ ಮೂಲಕ ವಿರಾಟ್ ಕೊಹ್ಲಿ ಅವರು ಆರ್ ಸಿಬಿ ತಂಡದಲ್ಲಿ ರಾಜಾಧಿರಾಜನಾಗಿದ್ದು, 17ನೇ ವರ್ಷದ ನಿಷ್ಠೆ ಅವರಲ್ಲಿದೆ. 2008ರ ಎಪ್ರಿಲ್ 18 ರಂದು ಆರ್ ಸಿಬಿ ಪರ ಚೊಚ್ಚಲ ಐಪಿಎಲ್ ಪಂದ್ಯವನ್ನಾಡಿರುವ ಅವರು ಇದುವರೆಗೂ 237 ಐಪಿಎಲ್ ಮ್ಯಾಚ್ ನಲ್ಲಿ 7 ಶತಕ ಮತ್ತು 50 ಅರ್ಧ ಶತಕದೊಂದಿಗೆ ಒಟ್ಟು 7263 ರನ್ ಬಾರಿಸಿದ್ದಾರೆ.

ಇದು ಕೂಡ ಒಂದು ಸಾಧನೆಯಾಗಿದ್ದು, ರನ್ ಮಿಷಿನ್ ಕೊಹ್ಲಿಗೆ ಯಾರು ಸರಿಸಾಟಿ ಇಲ್ಲದಂತಾಗಿದೆ. ಬೇರೆ ಯಾವೊಬ್ಬ ಆಟಗಾರನೂ ಕೂಡ 15 ವರ್ಷ ಸುದೀರ್ಘವಾಗಿ ಒಂದೇ ತಂಡದಲ್ಲಿ ಆಟವಾಡಿಲ್ಲ ಎನ್ನುವುದೇ ಇಲ್ಲಿ ವಿಶೇಷ. ಆದರೆ, ಇನ್ನಿತರ ಎಂಟು ಆಟಗಾರರು ಒಂದೇ ತಂಡದಲ್ಲಿ ಆಟವಾಡಿರುವ ರೆಕಾರ್ಡ್ ಇದೆ. ಆದರೆ, ಇಷ್ಟು ವರ್ಷ ಆಟ ಆಡಿರುವ ರೆಕಾರ್ಡ್ ಕೊಹ್ಲಿ ಅವರದ್ದಾಗಿದೆ.

ಮಾರ್ಚ್ 2008ರಲ್ಲಿ ಚೊಚ್ಚಲ ಇಂಡಿಯನ್ ಪ್ರಿಮಿಯರ್ ಲೀಗ್ ನ ಹರಾಜು ದಿನ ಅಂದು, ರಾಯಲ್ ಚಾಲೆಂಜರ್ಸ್ ಬೆಂಗಳೂರು ಪ್ರಾಂಚೈಸಿಯು ಅಂಡರ್ – 19 ಆಟಗಾರ ವಿರಾಟ್ ಕೊಹ್ಲಿಯನ್ನು ಆಯ್ಕೆ ಮಾಡಿಕೊಂಡಿತ್ತು. ಅಂದಿನಿಂದ ಇಂದಿನ ವರೆಗೂ ಒಂದೇ ತಂಡದಲ್ಲಿ ಆಟವಾಡಿರುವುದು ಇದೀಗ ಇತಿಹಾಸ.
ಈ ಬಾರಿಯ ಐಪಿಎಲ್ ನಲ್ಲಿ ಆರ್ ಸಿಬಿ ಮೊದಲ ಪಂದ್ಯದಲ್ಲಿ ಚೆನ್ನೈ ಸೂಪರ್ ಕಿಂಗ್ಸ್ ತಂಡವನ್ನು ಎದುರಿಸಲಿದೆ.

More News

You cannot copy content of this page