Search

RCB WON THA WPL-2024: WPL- 2024: ಆರ್ ಸಿಬಿ ಕನಸು ನನಸು ಮಾಡಿದ ವನಿತೆಯರು: 16 ವರ್ಷಗಳ ಚಾಂಪಿಯನ್ ಪಟ್ಟದ ಕಾಯುವಿಕೆ ಕೊನೆಗೂ ಅಂತ್ಯಗೊಳಿಸಿದ ಮಹಿಳೆಯರು: ಹಣ್ಣುಮಕ್ಳೆ ಸ್ಟ್ರಾಂಗ್ ಗುರು…!

ನವದೆಹಲಿ: ರಾಯಲ್ ಚಾಲೆಂಜರ್ಸ್ ಬೆಂಗಳೂರು ಮಹಿಳೆಯರ ತಂಡವು ಪ್ರಸಕ್ತ ಸಾಲಿನ ಮಹಿಳಾ ಪ್ರೀಮಿಯರ್ ಲೀಗ್ ನ ಟೂರ್ನಿಯ ಚಾಂಪಿಯನ್ ಆಗಿ ಹೊರಹೊಮ್ಮಿತು. ಇದರಿಂದ ಆರ್ ಸಿ ಬಿ ತಂಡದ ಅಭಿಮಾನಿಗಳ ಅನೇಕ ವರ್ಷಗಳ ಬೇಡಿಕೆಯನ್ನು ಪುರುಷರು ಈಡೇರಿಸಿಲ್ಲ, ಆದರೆ ಮಹಿಳೆಯರ ತಂಡ ಈಡೇರಿಸಿದೆ.

ಕಳೆದ 16 ವರ್ಷಗಳಿಂದ ಪುರುಷರ ತಂಡವು ಪ್ರಶಸ್ತಿ ಜಯಿಸುವ ಕನಸು ಕಂಡಿತ್ತು. ಆದರೆ, ಒಮ್ಮೆಯೂ ಈಡೇರಲಿಲ್ಲ. ಆದರೆ, ಸ್ಮೃತಿ ಮಂದಾನ ನಾಯಕತ್ವದ ಮಹಿಳಾ ತಂಡವು ಮಹಿಳಾ ಪ್ರೀಮಿಯರ್ ಲೀಗ್ ನ ಎರಡನೇ ಆವೃತ್ತಿಯಲ್ಲಿ ಪ್ರಶಸ್ತಿಯನ್ನು ಮುಡಿಗೇರಿಸಿಕೊಂಡಿದೆ.

ದೆಹಲಿಯಲ್ಲಿ ನಡೆದ ಪಂದ್ಯದಲ್ಲಿ ಎಂಟು ವಿಕೆಟ್ ಗಳ ಅಂತರದಿಂದ ಡೆಲ್ಲಿ ಕ್ಯಾಪಿಟಲ್ಸ್ ತಂಡವನ್ನು ಮಣಿಸಿ ಚಾಂಪಿಯನ್ ಪಟ್ಟವನ್ನು ಅಲಂಕರಿಸಿತು. ಡೆಲ್ಲಿ ಕ್ಯಾಪಿಟಲ್ಸ್ ತಂಡಕ್ಕೆ ಇದು ಎರಡನೇ ಫೈನಲ್ ಸೋಲಾಗಿದೆ.
ಆರ್ ಸಿ ಬಿ ತಂಡವು ಕನ್ನತಿ ಶ್ರೇಯಾಂಕ ಪಾಟೀಲ ಅವರ ಸ್ಪಿನ್ ಮೋಡಿ ಮತ್ತು ಸೋಫಿ ಮಾಲಿನೋ ಅವರ ಮ್ಯಾಜಿಕ್ ಓವರ್ ನಿಂಜ ಬೆಂಗಳೂರು ತಂಡ ಜಯಭೇರಿ ಬಾರಿಸಿತು. ಟಾಸ್ ಗೆದ್ದು ಬ್ಯಾಟಿಂಗ್ ಆಯ್ಕೆ ಮಾಡಿಕೊಂಡ ಡೆಲ್ಲಿ ಕ್ಯಾಪಿಟಲ್ಸ್ ತಂಡವು 18.3 ಓವರ್ ಗಳಲ್ಲಿ 113 ರನ್ ಗಳಿಸಿತು.

ಈ ಸಾಧಾರಣ ಮೊತ್ತದ ಗುರಿಯನ್ನು ಬೆನ್ನತ್ತಿದ ಬೆಂಗಳೂರು ತಂಡ 19.3 ಓವರ್ ಗಳಲ್ಲಿ ಗುರಿ ಮುಟ್ಟಿ ಜಯ ತನ್ನದಾಗಿಸಿಕೊಂಡಿತ್ತು. ಕೊನೆಯ ಓವರ್ ನ ನಾಲ್ಕನೇ ಎಸೆತದಲ್ಲಿ ರಿಚಾ ಘೋಷ್ ಅವರು ಬೌಂಡರಿ ಬಾರಿಸುವುದರ ಮೂಲಕ ತಂಡಕ್ಕೆ ಜಯವನ್ನು ತಂದುಕೊಟ್ಟರು.

ಪ್ರಶಸ್ತಿ ಗೆದ್ದ ಆರ್ ಸಿಬಿ ತಂಡಕ್ಕೆ 6 ಕೋಟಿ ರೂಪಾಾಯಿ ಬಹುಮಾನ
ರನ್ನರ್ಸ್ ಅಪ್ ಡೆಲ್ಲಿ ಕ್ಯಾಪಿಟಲಸ್ ಗೆ 3 ಕೋಟಿ ರೂಪಾಯಿ ಬಹುಮಾನ
ಕನ್ನಡತಿ ಶ್ರೇಯಾಂಕ ಪಾಟೀಲಗೆ ಪರ್ಪಲ್ ಕ್ಯಾಪ್ ಮತ್ತು ಎಲಿಸ್ ಪೆರಿಗೆ ಆರೇಂಜ್ ಕ್ಯಾಪ್ ಪಡೆದುಕೊಂಡಿದ್ದಾರೆ.

More News

You cannot copy content of this page