Search

ANNA HAZARE ON KEJRIWAL ARREST: ಅಬಕಾರಿ ನೀತಿ ರೂಪಿಸದಂತೆ ನಾನು ಕೇಜ್ರಿವಾಲ್ ಗೆ ಎಚ್ಚರಿಸಿದ್ದೆ: ಅಣ್ಣಾ ಹಜಾರೆ

ಮುಂಬೈ: ದಶಕದ ಹಿಂದೆ ಭ್ರಷ್ಟಾಚಾರ ವಿರೋಧಿ ಹೋರಾಟದಿಂದ ದೇಶದ ಗಮನ ಸೆಳೆದಿದ್ದ ಸಾಮಾಜಿಕ ಹೋರಾಟಗಾರ ಅಣ್ಣಾ ಹಜಾರೆ, ದೆಹಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಬಂಧನದ ಬಳಿಕ ಪ್ರತಿಕ್ರಿಯೆ ನೀಡಿದ್ದು, ಅಬಕಾರಿ ನೀತಿ ರೂಪಿಸದಂತೆ ಎಚ್ಚರಿಸಿದ್ದೆ ಎಂದು ತಿಳಿಸಿದ್ದಾರೆ.
ಅಬಕಾರಿ ನೀತಿಗೆ ಸಂಬಂಧಿಸಿದಂತೆ ಅಕ್ರಮ ಹಣ ವರ್ಗಾವಣೆ ಪ್ರಕರಣದಲ್ಲಿ ಜಾರಿ ನಿರ್ದೇಶನಾಲಯ ಕೇಜ್ರಿವಾಲ್ ಅವರನ್ನು ಬಂಧಿಸಿದೆ. ಈ ಬಗ್ಗೆ ಪ್ರತಿಕ್ರಯಿಸಿದ ಅವರು ಅವರ ಕೃತ್ಯವೇ ಅವರಿಗೆ ಮುಳುವಾಗಿದೆ ಎಂದಿದ್ದಾರೆ.
ಮದ್ಯ ಕೆಟ್ಟದ್ದು ಅಂತ ಚಿಕ್ಕಮಕ್ಕಳಿಗೂ ಗೊತ್ತು, ಅಬಕಾರಿ ನೀತಿ ರೂಪಿಸುವುದು ನಮ್ಮ ಕೆಲಸವಲ್ಲ ಎಂದು ಅವರಿಗೆ ಎಚ್ಚರಿಕೆ ಕೊಟ್ಟಿದ್ದೆ, ಇದರಿಂದ ಹಿಂದೆ ಸರಿಯುವಂತೆ ಸಲಹೆ ನೀಡಿದ್ದೆ ಎಂದು ಅವರು ಮಹಾರಾಷ್ಟ್ರದ ಹಳ್ಳಿ ರಾಲೇಗಾಂವ್ ನಲ್ಲಿ ಮಾತನಾಡಿದ್ದಾರೆ.

ನನ್ನ ವಿರುದ್ಧ ಮದ್ಯದ ವಿರುದ್ಧ ಧ್ವನಿ ಎತ್ತಿದವರೇ ಅಬಕಾರಿ ನೀತಿ ರೂಪಿಸುತ್ತಿದ್ದಾರೆ ಎಂದು ನನಗೆ ಬಹಳ ನೋವಾಗಿತ್ತು ಎಂದು ತಿಳಿಸಿದ ಅವರು, ಅಬಕಾರಿ ನೀತಿಯಿಂದ ಹೆಚ್ಚು ಆದಾಯಬರಲಿದೆ ಎಂದು ಕೇಜ್ರಿವಾಲ್ ಭಾವಿಸಿದ್ದರು. ಅದಕ್ಕಾಗಿ ನೀತಿ ರೂಪಿಸಿದ್ದರು ಎಂದು ಹೇಳಿದ ಅವರು ಅವರು ಏನು ತಪ್ಪು ಮಾಡಿಲ್ಲದಿದ್ದರೆ ಬಂಧನದ ಅವಶ್ಯಕತೆ ಬೀಳುತ್ತಿರಲಿಲ್ಲ ಎಂದರು.

More News

You cannot copy content of this page