ಹುಬ್ಬಳ್ಳಿ: ಯಾವುದೇ ಕೋಚಿಂಗ್ ಸಹಾಯವಿಲ್ಲದೇ. ಸ್ವಂತ ಪರಿಶ್ರಮದಿಂದಲೇ ಹುಬ್ಬಳ್ಳಿಯ ಯುವತಿ ಬಹುದೊಡ್ಡ ಸಾಧನೆ ಮಾಡಿದ್ದಾಳೆ. ಯು.ಪಿ.ಎಸ್.ಸಿ ಪರೀಕ್ಷೆಯಲ್ಲಿ 440ನೇ ರ್ಯಾಂಕ್ ಪಡೆಯುವ ಮೂಲಕ ಹುಬ್ಬಳ್ಳಿಯ ಕೀರ್ತಿಯನ್ನು ಹೆಚ್ಚಿಸಿದ್ದಾರೆ. ಓದುವುದನ್ನೇ ಫ್ಯಾಷನ್ ಆಗಿಸಿಕೊಂಡ ಯುವತಿ ಈಗ ಯು.ಪಿ.ಎಸ್.ಸಿ ಪರೀಕ್ಷೆಯಲ್ಲಿ 440ನೇ ರ್ಯಾಂಕ್ ಪಡೆಯುವ ಮೂಲಕ ಹುಬ್ಬಳ್ಳಿಯ ಕೀರ್ತಿಯನ್ನು ರಾಷ್ಟ್ರೀಯ ಮಟ್ಟದಲ್ಲಿ ಹೆಚ್ಚಿಸಿದ್ದಾರೆ.
ಕಿರಾಣಿ ವರ್ತಕರ ಮಗಳು ಈಗ ಯು.ಪಿ.ಎಸ್.ಸಿಯಲ್ಲಿ 440ನೇ ರ್ಯಾಂಕ್ ಬಂದಿರುವುದು ನಿಜಕ್ಕೂ ಹೆಮ್ಮೆಯ ಸಂಗತಿಯಾಗಿದೆ. ಓದಿರುವುದು ಇಂಜಿನಿಯರಿಂಗ್ ಆಗಿದ್ದರೂ ಸಿವಿಲ್ ಸರ್ವೀಸ್ ಮಾಡಬೇಕು ಎಂಬುವಂತ ಮಹದಾಸೆಯಲ್ಲಿಯೇ ಸತತ ಪರಿಶ್ರಮದಿಂದ ಕನಸನ್ನು ನನಸು ಮಾಡಿಕೊಂಡಿದ್ದಾರೆ. ಹೌದು.. ಹುಬ್ಬಳ್ಳಿಯ ಅಭಯ ಜೈನ್ ಹಾಗೂ ಇಂದಿರಾ ಜೈನ್ ಅವರ ಪುತ್ರಿ ಕೃಪಾ ಎ ಜೈನ್ ಎಂಬುವವರೇ ಯು.ಪಿ.ಎಸ್.ಸಿಯಲ್ಲಿ 440 ನೇ ರ್ಯಾಂಕ್ ಪಡೆದು ಹೆತ್ತವರ ಹಾಗೂ ಹುಬ್ಬಳ್ಳಿಯ ಕೀರ್ತಿಯನ್ನು ಹೆಚ್ಚಿಸಿದ್ದಾರೆ.
ಇನ್ನೂ ಬೆಂಗಳೂರಿನಲ್ಲಿ ಆರ್.ವಿ ಕಾಲೇಜಿನಲ್ಲಿ ಕಂಪ್ಯೂಟರ್ ಸೈನ್ಸ್ ಓದಿ ಸಿಸ್ಕೋ ಬೆಂಗಳೂರಿನಲ್ಲಿ ಕರ್ತವ್ಯ ನಿರ್ವಹಿಸಿದ್ದಾರೆ. 2020ರಲ್ಲಿ ಯು.ಪಿ.ಎಸ್.ಸಿ ಮಾಡಲೇಬೇಕು ಎಂದು ಛಲತೊಟ್ಟ ಛಲಗಾರ್ತಿ ದೆಹಲಿಗೆ ತೆರಳಿ ಯಾವುದೇ ಕೋಚಿಂಗ್ ಇಲ್ಲದೆಯೇ ಸ್ವಂತ ಪರಿಶ್ರಮ, ನಿರಂತರ ಪ್ರಯತ್ನದ ಮೂಲಕ ಈಗ ಮಹತ್ವದ ಸಾಧನೆ ಮಾಡಿದ್ದಾರೆ. ಕಳೆದ ವರ್ಷ ಯು ಪಿ ಎಸ್ ಸಿಯಲ್ಲಿ ರೈಲ್ವೆ ಜಾಬ್ ಆಗಿದ್ದರೂ ಕೂಡ ಮರಳಿ ಯತ್ನವು ಮಾಡು ಎಂಬುವಂತ ಈಗ 440ನೇ ರ್ಯಾಂಕ್ ಪಡೆದಿದ್ದಾರೆ. ಯುವತಿಯ ಸಾಧನೆಗೆ ಹೆತ್ತವರು ಹಾಗೂ ಕುಟುಂಬಸ್ಥರು ಖುಷಿಯನ್ನು ಹಂಚಿಕೊಂಡಿದ್ದಾರೆ.