Search

NIRANJAN HIREMATH REACTION: ನನ್ನ ಮಗಳ ಸಾವಿಗೆ ಫಯಾಝ್ ಸಾವು ನ್ಯಾಯವಾಗಬೇಕು: ನಿರಂಜನಯ್ಯ ಆಗ್ರಹ..!

ಹುಬ್ಬಳ್ಳಿ: ನಮ್ಮ ಕುಟುಂಬಕ್ಕೆ ಭದ್ರತೆ ಒದಗಿಸಬೇಕು. ವಿಶೇಷ ನ್ಯಾಯಲಯದಲ್ಲಿ 90 ರಿಂದ 120 ದಿನಗಳಲ್ಲಿ ನ್ಯಾಯ ಸಿಗಬೇಕು. ಸಾವಿಗೆ ಸಾವೇ ಶಿಕ್ಷೆಯಾಗಬೇಕು. ಫಯಾಜ್ ನನ್ನು ಗಲ್ಲಿಗೇರಿಸಿದ ಮೇಲೆಯೆ ನಮಗೆ ಸಮಾಧಾನ ಎಂದು ನಿರಂಜನಯ್ಯ ಹಿರೇಮಠ ಅವರು, ಸಿಎಂ ಸಿದ್ದರಾಮಯ್ಯ ಮುಂದೆ ಮಗಳ ಸಾವಿಗೆ ನ್ಯಾಯ ಕೇಳಿದರು.

ಸಿಎಂ ಸಿದ್ಧರಾಮಯ್ಯನವರ ಜೊತೆಗೆ ಮಾಧ್ಯಮದ ಮೂಲಕ ಮಾತನಾಡಿದ ಅವರು, ಮಗಳ ಸಾವಿಗೆ ನ್ಯಾಯ ಸಿಗುವವರೆಗೂ ಹೋರಾಟ ಮಾಡುತ್ತೇವೆ. ಸರ್ಕಾರ ನಮ್ಮ ಬೆನ್ನಿಗೆ ಇರಬೇಕು. ಸಿಎಮ್ ನಮ್ಮ‌ ಜೊತೆಗಿದ್ದು ನ್ಯಾಯ ಕೊಡಿಸಬೇಕೆಂದು ಮನವಿ ಮಾಡುತ್ತೇನೆ ಎಂದರು.

ಸಿಐಡಿ ತನಿಖೆಗೆ ಕೊಟ್ಟಿದ್ದು ಸಂತೋಷ ತಂದಿದೆ. ಕಾಂಗ್ರೆಸ್ ಮುಖಂಡರೆಲ್ಲ ನನ್ನ ಬೆನ್ನಿಗೆ ನಿಂತಿದ್ದಾರೆ. ಕೋಪದಲ್ಲಿ ಯಾರಿಗಾದರೂ ನೋವು ತರುವ ಹಾಗೆ ಮಾತಾಡಿದ್ದರೆ ಕ್ಷಮೆ ಕೋರುತ್ತೇನೆ ಎಂದ ನಿರಂಜನಯ್ಯ ಹೇಳಿದರು.

More News

You cannot copy content of this page