ಹುಬ್ಬಳ್ಳಿ: ಕೆಎಲ್ಇ ಬಿವ್ಹಿಬಿ ಕಾಲೇಜಿನಲ್ಲಿ ಕೊಲೆಯಾದ ನೇಹಾ ಹಿರೇಮಠ ಪ್ರಕರಣದ ತನಿಖೆ ನಡೆಸುತ್ತಿರುವ ಸಿಐಡಿ ತಂಡ ಕಾರ್ಯಾಚರಣೆ ಚುರುಕುಗೊಳಿಸಿದ್ದು, ಈ ನಿಟ್ಟಿನಲ್ಲಿ ಮತ್ತಷ್ಟು ತನಿಖೆ ನಡೆಸಲು ಸಿಐಡಿ ಡಿಐಜಿ ಸುಧೀರ್ ಕುಮಾರ ರೆಡ್ಡಿ ಹುಬ್ಬಳ್ಳಿಗೆ ಆಗಮಿಸಿದ್ದಾರೆ..
ಹೌದು..ಹುಬ್ಬಳ್ಳಿ ವಿಮಾನ ನಿಲ್ದಾಣಕ್ಕೆ ಬಂದಿಳಿದ ಡಿಐಜಿ ಸುಧೀರ್ ಕುಮಾರ ರೆಡ್ಡಿ, ನೇಹಾ ಹತ್ಯೆ ಪ್ರಕರಣ ಹಿನ್ನೆಲೆ ಡಿಐಜಿ ಸುಧೀರ್ ಕುಮಾರರೆಡ್ಡಿ ಆಗಮಿಸಿದ್ದಾರೆ. ನೇಹಾ ಹತ್ಯೆ ಪ್ರಕರಣದ ತನಿಖೆ ಮತ್ತಷ್ಟು ಚುರುಕುಗೊಂಡಿದೆ.
ಈಗಾಗಲೇ ಆರು ದಿನಗಳ ಕಾಲ ಆರೋಪಿ ಫಯಾಜ್ ನನ್ನ ಸುಪರ್ದಿಗೆ ತೆಗೆದುಕೊಂಡ ಸಿಐಡಿ ಅಧಿಕಾರಿಗಳು,
ನಾಳೆ ಕೊನೆಯ ದಿನ ಹಿನ್ನೆಲೆ ಇಂದು ಹುಬ್ಬಳ್ಳಿಗೆ ಡಿಐಜಿ ಬಂದಿಳಿದಿದ್ದಾರೆ. ಈಗಾಗಲೇ ತನಿಖೆ ನಡೆಸಿರುವ ಕುರಿತು ಪರಿಶೀಲನೆ ನಡೆಸಲಿರುವ ಡಿಐಜಿ ಸುಧೀರ್ ಕುಮಾರ ರೆಡ್ಡಿ, ನಾಳೆ ಆರೋಪಿಯನ್ನ ಮತ್ತೆ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಿದ್ದಾರೆ.