Search

BOLLYWOOD BADSHAH SHAHRUKH KHAN: ಶಾರುಖ್ ಖಾನ್ ಬಾಲಿವುಡ್ ಚಿತ್ರರಂಗ ಪ್ರವೇಶಿಸಿ ಇಂದಿಗೆ 30ವರ್ಷ: ‘ಪಠಾಣ್’ ಹೊಸ ಪೋಸ್ಟರ್ ರಿಲೀಸ್

ಮುಂಬೈ: ಬಾಲಿವುಡ್ ಬಾದ್ ಷಾ, ಶಾರುಖ್ ಖಾನ್ ಬಾಲಿವುಡ್ ಚಿತ್ರರಂಗ ಪ್ರವೇಶಿಸಿ ಇಂದಿಗೆ 30 ವರ್ಷ. ಈ ಹಿನ್ನೆಲೆಯಲ್ಲಿ ಅವರ ನೂತನ ಚಿತ್ರ ಪಠಾಣ್ 2023ರಲ್ಲಿ ತೆರೆಗೆ ಬರಲಿದೆ. ಈ ಹಿನ್ನೆಲೆಯಲ್ಲಿ ಚಿತ್ರತಂಡ ಪಠಾಣ್ ಚಿತ್ರದ ಪೋಸ್ಟರ್ ಬಿಡುಗಡೆ ಮಾಡಿದೆ.
ಪೋಸ್ಟರ್ ಬಿಡುಗಡೆ ಮಾಡಿ ಶುಭಕೋರಿರುವ ಚಿತ್ರತಂಡ. ಶಾರುಖ್ ಖಾನ್ ಅವರು ನಟಿಸುವ ಎಲ್ಲಾ ಚಿತ್ರಗಳು ಯಶಸ್ವಿಯಾಗಲಿ ಎಂದು ಶುಭಕೋರಿದೆ. 1992ರ ಜುಲೈ 25ರಂದು ಬಿಡುಗಡೆಯಾಗಿದ್ದ ದಿವಾನ ಚಿತ್ರ ಶಾರುಖ್ ಖಾನ್ ಅವರ ಮೊದಲ ಚಿತ್ರ, ಹಾಗೂ ಇಂದೇ ಬಿಡುಗಡೆಯಾಗಿತ್ತು. ಅದಾದ ಬಳಿಕ ಅವರು ಸಾಲು ಸಾಲು ಚಿತ್ರಗಳಲ್ಲಿ ನಟಿಸಿದ್ದು, ಯಶಸ್ವಿ ನಟರೂ ಆಗಿದ್ದಾರೆ.
ಆಕ್ಷನ್ – ಥ್ರಿಲ್ಲರ್ ಚಿತ್ರಕಥೆಯನ್ನು ಹೊಂದಿರುವ ಪಠಾಣ್ ಚಿತ್ರ, ಯಶ್ ರಾಜ್ ಬ್ಯಾನರ್ ನಡಿಯಲ್ಲಿ ನಿರ್ಮಾಣವಾಗುತ್ತಿದೆ. ಈ ಚಿತ್ರ ಸಿದ್ದಾರ್ಥ ಆನಂದ್ ನಿರ್ದೇಶನ ಮಾಡುತ್ತಿದ್ದು, ಹಿಂದಿ, ತಮಿಳು ಹಾಗೂ ತೆಲುಗಿನಲ್ಲಿ ಮುಂಬರುವ 2023 ರಲ್ಲಿ ತೆರೆ ಕಾಣಲಿದೆ.

ಈ ಚಿತ್ರದಲ್ಲಿ ಶಾರುಖ್ ಅವರು ಗೂಢಚಾರನ ಪಾತ್ರದಲ್ಲಿ ಕಾಣುತ್ತಿದ್ದು, 2018ರಲ್ಲಿ ತೆರೆಕಂಡ ಝೀರೋ ಸಿನಿಮಾದ ನಂತರ ಅವರು ಅಭಿನಯಿಸುತ್ತಿರುವ ಸಿನಿಮಾ ಪಠಾಣ್, ಇದರಲ್ಲಿ ಜಾನ್ ಅಬ್ರಾಹಂ ಕೂಡ ವಿಶೇಷ ಪಾತ್ರದಲ್ಲಿ ಅಭಿನಯಿಸುತ್ತಿದ್ದಾರೆ.

ಪಠಾಣ್ ಬಿತ್ರದ ಪೋಸ್ಟರ್ ಗೆ ಶಾರುಖ್ ಅವರ ಅಭಿಮಾನಿಗಳು ಫುಲ್ ಖುಷ್ ಆಗಿದ್ದು, ಪೋಸ್ಟರ್ ಸಾಮಾಜಿಕ ಜಾಲತಾಣದಲ್ಲಿ ಸಾಕಷ್ಟು ವೈರಲ್ ಆಗಿದೆ.

#shahrukhkhan, #bollwoodbadshah, #patan, #deewana, #zero, #poster, #yeshrajfilms, #patanreleaseingon 2023, #siddarathanand, #adithyachopra

More News

You cannot copy content of this page