Search

KH MUNIYAPPA REACTION: ಈ ರಾಜೀನಾಮೆ ಎಂಬುದು ನಾಟಕ ವಾಗಿದೆ ಯಾರು ರಾಜೀನಾಮೆಯನ್ನು ಕೊಡುವುದಿಲ್ಲಾ: ಸಚಿವ ಮುನಿಯಪ್ಪ

ಬೆಂಗಳೂರು: ಇಂದು ಸಂಜೆ ಮಾನ್ಯ ಮುಖ್ಯ ಮಂತ್ರಿಗಳವರನ್ನು ಭೇಟಿ ಮಾಡಲಿದ್ದು, ನಿನ್ನೆ ನಡೆದ ರಾಜೀನಾಮೆಯ ಪ್ರಸಂಗದ ಕುರಿತು ಚರ್ಚಿಸಲಿದ್ದೇನೆ ಕಾಂಗ್ರೆಸ್ ಪಕ್ಷದಲ್ಲಿ ಸರಿಸುಮಾರು 40 ವರ್ಷಗಳಿಂದ ಸತತವಾಗಿ ರಾಜಕೀಯ ಮಾಡಿದ್ದು ಪಕ್ಷ 10 ವರ್ಷಗಳ ಕಾಲ ಕೇಂದ್ರದಲ್ಲಿ ಸಚಿವನನ್ನಾಗಿಸಿದೆ.

ನಿನ್ನ ನಡೆದ ಘಟನೆಗಳ ರೂವಾರಿ ಯಾರೆಂದು ಮಾಧ್ಯಮದವರೇ ನನಗೆ ತಿಳಿಸಬೇಕು. ನನಗಂತೂ ದಿಗ್ ಬ್ರಮೆಯಾಗಿದೆ.

ಕಾಂಗ್ರೆಸ್‌ನ ಹೈಕಮಾಂಡ್ ನೀಡುವ ನಿರ್ಧಾರಕ್ಕೆ ನಾವೆಲ್ಲರೂ ಬದ್ಧನಾಗಿ ಕಾರ್ಯನಿರ್ವಹಿಸುತ್ತೇವೆ. ನಿನ್ನ ನಡೆದಿರುವ ರಾಜೀನಾಮೆಯ ಪ್ರಹಸನ ನನಗೆ ಆಶ್ಚರ್ಯ ಉಂಟುಮಾಡಿದ್ದು

ನಾನು ಕೇಂದ್ರ ಮಟ್ಟದಲ್ಲಿ ರಾಜಕಾರಣ. ಮಾಡಿರುವನಾಯಕ , ಕಾಂಗ್ರೆಸ್ ಪಕ್ಷವು ಕುಟುಂಬದ ಹಲವರಿಗೆ ಟಿಕೆಟ್ ನೀಡಿರುವುದುರಿಂದ ಸಹಜವಾಗಿಯೇ ನಾನೂ ನನ್ನ ಕುಟುಂಬಕ್ಕೆ ಟಿಕೆಟ್ ಆಕಾಂಕ್ಷಿಯಾಗಿದ್ದೇನೆ, ದೊರೆಯುವ ಆಶಾಭಾವನೆಯಿಂದಿದ್ದು, ನಾನು ಕೋಲಾರ ಲೋಕಸಭಾ ಕ್ಷೇತ್ರ ಹಾಗೂ ಚಿಕ್ಕಬಳ್ಳಾಪುರ ಲೋಕಸಭಾ ಕ್ಷೇತ್ರವನ್ನು ಗೆಲ್ಲಿಸಿಕೊಂಡು ಬರುವ ಭರವಸೆಯನ್ನು ಮಾನ್ಯ ಮುಖ್ಯಮಂತ್ರಿಗಳಿಗೆ ಹಾಗೂ ಕೆ.ಪಿ.ಸಿ.ಸಿ ಅಧ್ಯಕ್ಷರವರಿಗೆ ನೀಡಿದ್ದೇನೆ.

ಇಂದು ಶ್ರೀ ಡಿ.ಕೆ. ಸುರೇಶ್ ರವರು ನಾಮಪತ್ರ ಸಲ್ಲಿಸುವ ಹಿನ್ನಲೆಯಲ್ಲಿ ಮುಖ್ಯ ಮಂತ್ರಿಗಳು ಹಾಗೂ ಕೆ.ಪಿ.ಸಿ.ಸಿ ಅಧ್ಯಕ್ಷರ ಜೊತೆಗೆ ಇರುವುದರಿಂದ ನಿನ್ನೆ ನಡೆದಿರುವ ಮಾಹಿತಿಗಳನ್ನು ಮುಖ್ಯ ಮಂತ್ರಿಗಳಿಗ ಮಾತನಾಡಲು ಇಂದು ಸಂಜೆ ಭೇಟಿ ನೀಡಿ ಚರ್ಚಿಸಿ ತದ ನಂತರ ತಮ್ಮ ಗಮನಕ್ಕೆ ತರಬಯಸುತ್ತೇನೆಂದು ಹೇಳಿದರು. ಕೋಲಾರ ಲೋಕಸಭಾ ಕ್ಷೇತ್ರದ ಅಭ್ಯರ್ಥಿಯ ಗೆಲುವು ಕಾಂಗ್ರೆಸ್ ಪಕ್ಷದ್ದಾಗಿರಬೇಕೇ ವಿನ: ವ್ಯಕ್ತಿ ಪ್ರತಿಷ್ಠೆಯಿಂದ ಕೂಡಿರಬಾರದು. ನಾವೇಲ್ಲರೂ ಒಗ್ಗಟ್ಟಾಗಿ ಚುನಾವಣೆಯನ್ನು ಎದುರಿಸಿ ಹೈಕಮಾಂಡ್ ಸೂಚಿಸುವ ಅಭ್ಯರ್ಥಿಯನ್ನು ಗೆಲ್ಲಿಸಿಕೊಂಡು ಬರುವುದು ನಮ್ಮ ಅಧ್ಯ ಕರ್ತವ್ಯವಾಗಿದೆ.

ಕಾಂಗ್ರೆಸ್ ಪಕ್ಷ ಒಂದು ಕುಟುಂಬವಿದ್ದಂತೆ ಈ ಜಗಳ ಹಾಗೂ ಮನಸ್ಥಾಪಗಳನ್ನು ನಮ್ಮ ಹಂತದಲ್ಲಿಯೇ ಭಗಹರಿಸಿಕೊಂಡು ಮುನ್ನಡೆಯಬೇಕಾಗಿದೆ ಈ ರೀತಿಯಲ್ಲಿ ರಾಜೀನಾಮೆ ನೀಡುವ ಹಂತಕ್ಕೆ ಯಾವ ಕಾರಣದಿಂದ ಹೋದರು ಎಂಬುವುದು ಕುತೂಹಲಕರವಾಗಿದೆ
ಸಂಜೆ ವರಗೂ ಕಾದು ನೋಡಿ ಎಲ್ಲವೂ ಗೊತ್ತಾಗಳಿದೆ ಎಂದರು.

More News

You cannot copy content of this page