Search

SUPER CLEAR- I AM NOT DONATING MONEY: ನಾನು ಯಾವ ಅಧ್ಯಕ್ಷೀಯ ಅಭ್ಯರ್ಥಿಗೂ ದೇಣಿಗೆ ನೀಡುತ್ತಿಲ್ಲ: ದೇಶದ ಶ್ರೀಮಂತ ವ್ಯಕ್ತಿ ಎಲಾನ್ ಮಸ್ಕ್ ಸ್ಪಷ್ಟನೆ

ವಾಷಿಂಗ್ಟನ್: ಮುಂದಿನ ನವೆಂಬರ್ ನಲ್ಲಿ ನಡೆಯಲಿರುವ ಅಮೆರಿಕಾದ ಅಧ್ಯಕ್ಷೀಯ ಚುನಾವಣೆಗೆ ಭರದ ಸಿದ್ದತೆ ನಡೆಯುತ್ತಿದೆ. ಡೆಮಾಕ್ರೆಟಿಕ್ ಮತ್ತು ರಿಪಬ್ಲಿಕನ್ ಪಕ್ಷಗಳು ಅಧ್ಯಕ್ಷಗಿರಿಗಾಗಿ ಪೈಪೋಟಿ ಆರಂಭಿಸಿವೆ.
ಇದರ ನಡುವೆಯೇ ವಿಶ್ವದ ಎರಡನೇ ಶ್ರೀಮಂತ ವ್ಯಕ್ತಿ ಹಾಗೂ ಟೆಸ್ಲಾ ಸಿಇಒ ಎಲಾನ್ ಮಸ್ಕ್ ಟ್ವೀಟ್ ಸಾಕಷ್ಟು ಸುದ್ದಿ ಮಾಡುತ್ತಿದೆ. ಅಮೆರಿಕಾದ ಅಧ್ಯಕ್ಷೀಯ ಚುನಾವಣೆ ಹಿನ್ನೆಲೆಯಲ್ಲಿ ನಾನು ಉಭಯ ಪಕ್ಷಗಳಿಗೂ ಹಣ ದೇಣಿಗೆ ನೀಡುವ ಯೋಚನೆ ಹೊಂದಿಲ್ಲ ಎಂದು ಸ್ಪಷ್ಟಪಡಿಸಿದ್ದಾರೆ.

ಈ ಟ್ವೀಟ್ ಗೆ ಉಭಯ ಪಕ್ಷಗಳ ನಾಯಕರು ಯಾರೂ ಪ್ರತಿಕ್ರಿಯೆ ನೀಡಿಲ್ಲ. ಆದರೆ, ಸಾಮಾಜಿಕ ಜಾಲತಾಣದಲ್ಲಿ ಮಾತ್ರ ಸಾಕಷ್ಟು ಸುದ್ದಿ ಮಾಡುತ್ತಿದೆ. ಎರಡು ದಿನಗಳ ಹಿಂದೆಯಷ್ಟೇ ಎಲಾನ್ ಮಸ್ಕ್ ಅವರು ಮಾಜಿ ಅಧ್ಯಕ್ಷ ಡೋನಾಲ್ಡ್ ಟ್ರಂಪ್ ಅವರನ್ನು ಪ್ಲೋರಿಡಾದಲ್ಲಿ ಭೇಟಿಯಾಗಿ ಮಾತುಕತೆ ನಡೆಸಿದ್ದರು.
ಭಾನುವಾರ ಪ್ರೋರಿಡಾದ ಫಾಮ್ ಬೀಚ್ ನಲ್ಲಿ ಎಲಾನ್ ಮಸ್ಕ್ ಸೇರಿದಂತೆ ದೇಶದ ಬಿಲಿಯನೇರ್ ಗಳು, ಉದ್ಯಮಿಗಳು ಖಾಸಗಿಯಾಗಿ ಭೇಟಿ ಮಾಡಿ ಚರ್ಚೆ ನಡೆಸಿದ್ದರು ಎಂದು ನ್ಯೂಯಾರ್ಕ್ ಟೈಮ್ಸ್ ವರದಿ ಮಾಡಿತ್ತು. ಇದಾದ ಎರಡು ದಿನಗಳ ಬಳಿಕ ಎಲಾನ್ ಮಸ್ಕ್ ಟ್ವೀಟ್ ಮಾಡಿ ಸ್ಪಷ್ಟವಾಗಿ ಹೇಳಬೇಕೆಂದರೆ ನಾನು ಯಾವ ಅಧ್ಯಕ್ಷೀಯ ಅಭ್ಯರ್ಥಿಗೂ ದೇಣಿಗೆ ನೀಡುತ್ತಿಲೆಲ ಎಂದು ಸ್ಪಷ್ಟಪಡಿಸಿದ್ದಾರೆ.

More News

You cannot copy content of this page