Search

CRORES RS GOLD SEIZED: ಕೈ ಚೀಲ ಹಿಡಿದು ಅನುಮಾನಾಸ್ಪದ ರೀತಿದಲ್ಲಿ ಓಡಾಡುತ್ತಿದ್ದ ಯುವಕ ಬಂಧನ: ₹ 3.55 ಕೋಟಿ ಮೌಲ್ಯದ ಚಿನ್ನ ಪತ್ತೆ

ಚಿತ್ರದುರ್ಗ: ತರಕಾರಿ, ಹಾಲು, ಹೂವು, ಹಣ್ಣು ಹಂಪಲುಗಳನ್ನು ತೆಗೆದುಕೊಂಡು ಹೋಗುವಂತೆ ಕೈ ಚೀಲದಲ್ಲಿ ಕೋಟ್ಯಂತರ ರೂಪಾಯಿ ಮೌಲ್ಯದ ಚಿನ್ನಾಭರಣಗಳ್ನು ಕೊಂಡೊಯ್ಯುತ್ತಿದ್ದ ವ್ಯಕ್ತಿ ಪೊಲೀಸರ ಬಲೆಗೆ ಸಿಕ್ಕಿಬಿದ್ದಿದ್ದಾನೆ.
ಚಿತ್ರದುರ್ಗ ಜಿಲ್ಲೆಯ ಹಿರಿಯೂರು ನಗರದಲ್ಲಿ ವ್ಯಕ್ತಿಯೊಬ್ಬ ಚಿಕ್ಕ ಚಿಕ್ಕ ಪ್ಲಾಸ್ಸಿಕ್‌ ಕವರ್‌, ಅಡುಗೆ ಮನೆಯಲ್ಲಿ ಉಪ್ಪು, ಸಂಬಾರ್‌ ಪುಡಿ ಹಾಕುವಂತಾ ಡಬ್ಬಿಗಳಲ್ಲಿ ಚಿನ್ನಾಭರಣಗಳನ್ನು ಇಟ್ಟು ಸಾಗಿಸುತ್ತಿದ್ದಾಗ ಪೊಲೀಸರ ಬಲೆಗೆ ಸಿಕ್ಕಿಬಿದ್ದಿದ್ದಾನೆ.

ಆತನ ಕೈ ಚೀಲದಿಂದ ₹ 3.55 ಕೋಟಿ ಮೌಲ್ಯದ ಚಿನ್ನ ಪತ್ತೆಯಾಗಿದ್ದು, ಪೊಲೀಸರು ಆತನನ್ನು ಬಂಧಿಸಿ ತನಿಖೆ ನಡೆಸುತ್ತಿದ್ದಾರೆ.
ಚಿನ್ನದ ಸರ, ಕಿವಿಯೋಲೆ ಹಾಕಿಕೊಂಡು ಚಿಕ್ಕ ಸುಳಿವು ಸಿಗದಂತೆ ಹಿರಿಯೂರು ನಗರದಲ್ಲಿ ವ್ಯಕ್ತಿಯೊಬ್ಬ ಅನುಮಾನ್ಪದವಾಗಿ ಓಡಾಡುತ್ತಿದ್ದ, ಆತನ ಕೈಯಲ್ಲಿ ಒಂದು ಕೈ ಚೀಲವಿತ್ತು. ಸಂಶಯ ಬಂದ ಪೊಲೀಸರು ಆತನನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಿದಾಗ ಕೋಟ್ಯಂತರ ರೂಪಾಯಿ ಮೌಲ್ಯದ ಚಿನ್ನ ಪತ್ತೆಯಾಗಿದೆ ಎಂದು ಹಿರಿಯೂರು ನಗರ ಪೊಲೀಸರು ತಿಳಿಸಿದ್ದಾರೆ.

ಬ್ಯಾಗ್‌ನಲ್ಲಿದ್ದ ಚಿನ್ನವನ್ನು ನೋಡಿ ಬೆಚ್ಚಿ ಬಿದ್ದ ಪೊಲೀಸರು, ಆತನ ಬಳಿ ಸೂಕ್ತ ದಾಖಲೆಗಳು ಇಲ್ಲದಿರುವುದನ್ನು ಖಚಿತಪಡಿಸಿದ್ದಾರೆ. ಬ್ಯಾಗ್‌ನಲ್ಲಿದ್ದ 5ಕೆಜಿ, 250ಗ್ರಾಂ,18 ಕ್ಯಾರೆಟ್ ಚಿನ್ನವನ್ನು ಪೊಲೀಸರು ವಶಪಡಿಸಿಕೊಂಡು ತನಿಖೆ ಮುಂದುವರೆಸಿದ್ದಾರೆ.

3.55 ಕೋಟಿಗೂ ಹೆಚ್ಚಿನ ಮೌಲ್ಯ ಚಿನ್ನಾಭರಣ ಅಂದಾಜಿಸಲಾಗಿದ್ದು, ದಾವಣಗೆರೆಯಿಂದ ವರ್ಧಮಾನ ಜೂವೆಲ್ಲರಿಯಿಂದ ಹಿರಿಯೂರಿನ ರಂಗನಾಥ ಜೂಯೆಲರ್ಸ್ ಅಂಗಡಿಗೆ ಕೊಡಲು ತಂದಿದ್ದರು ಎಂದು ತಿಳಿದುಬಂದಿದೆ.
ಆದರೆ ಸೂಕ್ತ ಅಧಿಕೃತ ದಾಖಲೆಗಳಿಲ್ಲ. ಆದ್ದರಿಂದ ಒಡವೆಗಳನ್ನು ವಶಪಡಿಸಿಕೊಂಡು ತಾಲೂಕು‌ ಖಜಾನೆಗೆ ಪೊಲೀಸರು ಒಪ್ಪಿಸಿದ್ದಾರೆ.

More News

You cannot copy content of this page