Search

Actor Dwarakish Passes Away: ನಟ, ನಿರ್ದೇಶಕ, ನಿರ್ಮಾಪಕ ಕನ್ನಡದ ಕುಳ್ಳ ದ್ವಾರಕೀಶ್ ಇನ್ನಿಲ್ಲ

ಬೆಂಗಳೂರು: ಕನ್ನಡ ಚಿತ್ರರಂಗದ ಹಿರಿಯ ನಟ, ನಿರ್ದೇಶಕ, ನಿರ್ಮಾಪಕ ಹಾಗೂ ಕನ್ನಡದ ಕುಳ್ಳು ಎಂದೇ ಖ್ಯಾತಿ ಪಡೆದಿದ್ದ ದ್ವಾರಕೀಶ್ ಇಂದು ಬೆಳಗ್ಗೆ ಸುಮಾರು 10.30ರ ಸಮಯದಲ್ಲಿ ಅವರ ಸ್ವಗೃಹದಲ್ಲಿ ನಿಧನಹೊಂದಿದ್ದಾರೆ.
ವಯೋಸಹಜ ಕಾಯಿಲೆಯಿಂದ ಬಳಲುತ್ತಿದ್ದ ದ್ವಾರಕೀಶ್ ಅವರಿಗೆ 81 ವರ್ಷ ವಯಸ್ಸಾಗಿತ್ತು. ಓರ್ವ ಹಾಸ್ಯ ನಟ 50 ಕ್ಕೂ ಹೆಚ್ಚು ಸಿನಿಮಾಗಳನ್ನು ನಿರ್ಮಾಣ ಮಾಡಿರುವುದು ಸಿನಿ ಜಗತ್ತಿನಲ್ಲಿಯೇ ದಾಖಲೆಯಾಗಿದೆ.
ದ್ವಾರಕೀಶ್ ಅವರು ವರನಟ ಡಾ. ರಾಜ್ ಕುಮಾರ್, ಸಾಹಸಸಿಂಹ ಡಾ. ವಿಷ್ಣುವರ್ಧನ್, ರೆಬಲ್ ಸ್ಟಾರ್ ಅಂಬರೀಷ್ ಸೇರಿದಂತೆ ಅನೇಕ ನಟರೊಂದಿಗೆ ನಟಿಸಿದ್ದಾರೆ. ಹಾಗೆಯೇ ಅನೇಕ ಸಿನಿಮಾಗಳನ್ನು ನಿರ್ಮಾಣ ಮಾಡಿದ್ದಾರೆ.

ಸಿಂಗಾಪುರದಲ್ಲಿ ಕಳ್ಳಾ ಕುಳ್ಳ ಸಿನಿಮಾವನ್ನು ವಿದೇಶದಲ್ಲಿ ಚಿತ್ರೀಕರಿಸಿ, ವಿದೇಶದಲ್ಲಿ ಚಿತ್ರೀಕರಣಗೊಂಡ ಮೊದಲ ಕನ್ನಡದ ಚಿತ್ರ ಎಂಬ ಹೆಗ್ಗಳಿಕೆಗೆ ಪಾತ್ರವಾಗಿದ್ದರು. ದ್ವಾರಕೀಶ್ ಅವರ ನಿಧನಕ್ಕೆ ಚಿತ್ರರಂಗದ ಗಣ್ಯರು ಹಾಗೂ ನಾನಾ ಪಕ್ಷದ ರಾಜಕೀಯ ವ್ಯಕ್ತಿಗಳು ಹಿತೈಷಿಗಳು ಸಂತಾಪ ಸೂಚಿಸಿದ್ದಾರೆ.

ಪುತ್ರನೊಂದಿಗೆ ವಾಸವಾಗಿದ್ದ ದ್ವಾರಕೀಶ್
ನಟ ದ್ವಾರಕೀಶ್ ಅವರು ತಮ್ಮ ಪುತ್ರ ಯೋಗೀಶ್ ದ್ವಾರಕೀಶ್ ರೊಂದಿಗೆ ಎಲೆಕ್ಟ್ರಾನಿಕ್ ಸಿಟಿಯಲ್ಲಿ ಸ್ಮೈಲ್ ಗ್ರೀನ್ಸ್ ವಿಲ್ಲಾದಲ್ಲಿ ವಾಸವಾಗಿದ್ರು. ರಾತ್ರಿ ಅವರಿಗೆ ಲೂಸ್ ಮೋಷನ್ ಆಗಿತ್ತು. ನೈಟ್ ನಾನು ಅಪ್ಪ ಒಟ್ಟೊಟ್ಟಿಗೆ ಮಲಗಿದ್ದೆವು, ಬೆಳಗ್ಗೆ ಕಾಫಿ ಬೇಕು ಅಂದ್ರು, ಕುಡಿದ ಬಳಿಕ ಎರಡು ತಾಸು ಮಲಗೋದಾಗಿ ಹೇಳಿದ್ದರು. ಆದ್ರೆ ನಿದ್ದೆಯಲ್ಲೇ ವಿಧಿವಶರಾಗಿದ್ದಾರೆ ಎಂದು ಅವರ ಪುತ್ರ ಯೋಗೀಶ್ ದ್ವಾರಕೀಶ್ ತಿಳಿಸಿದ್ದಾರೆ.

More News

You cannot copy content of this page