ಹುಬ್ಬಳ್ಳಿ: ಮೊನ್ನೆಯಷ್ಟೇ ಹುಬ್ಬಳ್ಳಿಯ ಬಿವ್ಹಿಬಿ ಕಾಲೇಜಿನಲ್ಲಿ ಕೊಲೆಯಾದ ನೇಹಾ ಹಿರೇಮಠ ಮನೆಗೆ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಹಾಗೂ ಕರ್ನಾಟಕ ಉಸ್ತುವಾರಿ ರಣಧೀಪ್ ಸುರ್ಜೆವಾಲಾ ಭೇಟಿ ನೀಡಿ ಮೃತಳ ಪಾಲಕರಿಗೆ ಸಾಂತ್ವನ ಹೇಳಿದರು.
ಹೌದು.. ಬಿಡನಾಳದಲ್ಲಿರುವ ನೇಹಾ ಹಿರೇಮಠ ನಿವಾಸಕ್ಕೆ ಆಗಮಿಸಿ ಸುರ್ಜೆವಾಲಾ ಅವರು ನಿರಂಜನಯ್ಯ ಹಿರೇಮಠ ಹಾಗೂ ಅವರ ಕುಟುಂಬಕ್ಕೆ ಸಾಂತ್ವನ ಹೇಳಿದರು.
ಇನ್ನೂ ಸಚಿವರಾದ ಸಂತೋಷ ಲಾಡ್, ಎಚ್.ಕೆ.ಪಾಟೀಲ, ಲೋಕಸಭಾ ಅಭ್ಯರ್ಥಿ ವಿನೋದ ಅಸೂಟಿ ಸೇರಿದಂತೆ ಕಾಂಗ್ರೆಸ್ ಮುಖಂಡರು ಸಾಂತ್ವನ ಹೇಳಿದರು.